Modi | ದಸರಾಗೆ ಮೋದಿ ಬರ್ತಾರಾ ? ಸಿಎಂ ಹೇಳಿದ್ದೇನು ?
ಕಲಬುರಗಿ : ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ ಭೇಟಿ ನೀಡದೆ ಇರೋದಕ್ಕೆ ಸಿದ್ದರಾಮಯ್ಯ ಗರಂ ಆಗಿದ್ದು, ಈ ಸಂಬಂಧ ಕಲಬುರಗಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಗರಂ ಆಗೋದು ಅವರಿಗೆ ಬಿಟ್ಟದ್ದು, ಆ ಘಟನೆಯಿಂದ ನಮ್ಮ ಮನಸಿಗೂ ನೋವಾಗಿದೆ. ಘಟನೆ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಇದೆ ವೇಳೆ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾತನಾಡಿದ ಸಿಎಂ, ಹಿಂದಿನ ಎಲ್ಲಾ ಕೇಸಗಳು ವಿಫಲವಾಗಿವೆ. ಈ ಕೇಸ್ ಕೂಡಾ ವಿಫಲವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ದಸರಾಗೆ ಮೋದಿ ಅವರು ಬರುವದು ಚರ್ಚೆಯಲ್ಲಿತ್ತು. ಅವರು ಬರೋದಿಲ್ಲಾ ಅಂತ ಸಂದೇಶ ನೀಡಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಇಡೀ ಕರ್ನಾಟಕ ದಲ್ಲಿ ಹೆಚ್ಚಿನ ಮಳೆಯಾಗಿದೆ. ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಎರಡು ಪಟ್ಟು ಹೆಚ್ಚು ಬೆಳೆ ಪರಿಹಾರ ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.