ಗಾಯಗೊಂಡ ಮೊಹಮ್ಮದ್ ಶಮಿ – ಬಾಂಗ್ಲಾ ಸರಣಿಯಿಂದ ಔಟ್…
ವೇಗದ ಬೌಲರ್ ಮೊಹಮ್ಮದ್ ಶಮಿ ಭುಜದ ಗಾಯದಿಂದಾಗಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಿಂದ ವಾಪಸ್ ಆದ ಬಳಿಕ ಅಭ್ಯಾಸ ನಡೆಸುವ ವೇಳೆ ಗಾಯಗೊಂಡಿದ್ದರು.
ಶಮಿ ಹೊರಗುಳಿದ ಬಳಿಕ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಬರಮಾಡಿಕೊಳ್ಳಲಾಗಿದೆ. ಉಮ್ರಾನ್ ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಉಮ್ರಾನ್ ಮೂರು ಏಕದಿನ ಪಂದ್ಯಗಳಿಂದ ಮೂರು ವಿಕೆಟ್ ಪಡೆದಿದ್ದಾರೆ. ಉಮ್ರಾನ್ ಏಕದಿನದ ಜೊತೆ ಎರಡು ಟೆಸ್ಟ್ ಪಂದ್ಯಗಳನ್ನೂ ಆಡಬೇಕಿದೆ.
ಮೊಹಮ್ಮದ್ ಶಮಿ ಗಾಯಗೊಂಡಿರುವ ಕಾರಣ ಟೀಂ ಇಂಡಿಯಾ ಸಂಕಷ್ಟ ಹೆಚ್ಚಾಗಿದೆ. ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಟಿ20 ವಿಶ್ವಕಪ್ನಲ್ಲೂ ತಂಡದ ಭಾಗವಾಗಿರಲಿಲ್ಲ. ಇತ್ತ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಕಾರಣ ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ಅವರಿಗೆ ಅವಕಾಶ ಸಿಗಬಹುದು. ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಟೀಮ್ ಇಂಡಿಯಾ ಎ ಸದಸ್ಯರಾಗಿದ್ದು ಬಾಂಗ್ಲಾ ಪ್ರವಾಸದಲ್ಲಿದ್ದಾರೆ.
Mohammad Shami : Injured Mohammad Shami – out of Bangladesh series…