ಶಮಿಗೆ ಕೊರೊನಾ ಪಾಸಿಟಿವ್.. ಆಸೀಸ್ ಸರಣಿಗೆ ದೂರ
ಟೀಂ ಇಂಡಿಯಾದ ವೇಗಿ ಬೌಲರ್ ಮೊಹ್ಮದ್ ಶಮಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಇದರೊಂದಿಗೆ ಈ ತಿಂಗಳ 20 ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ಶಮಿ ದೂರವಾಗಿದ್ದಾರೆ.
ಶಮಿ ಸ್ಥಾನದಲ್ಲಿ ಮತ್ತೊಬ್ಬ ವೇಗಿ ಉಮೇಶ್ ಯಾದವ್ ಭಾರತ ತಂಡ ಸೇರಿಕೊಂಡಿದ್ದಾರೆ.
ಭಾರತ, ಆಸ್ಟ್ರೇಲಿಯಾ ತಂಡಗಳ ನಡುವೆ ಈ ತಿಂಗಳ 20 ರಿಂದ ಮೊಹಲಿಯಲ್ಲಿ ಮೊದಲ ಮ್ಯಾಚ್ ನಡೆಯಲಿದೆ.

ಈಗಾಗಲೆ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಸೇರಿದಂತೆ ಹಲವು ಆಟಗಾರರು ಶನಿವಾರ ಸಂಜೆ ಛಂಡಿಗಡ್ ಸೇರಿಕೊಂಡಿದ್ದಾರೆ.
ಮುಂಬರುವ ತಿಂಗಳಿನಿಂದ ಟಿ 20 ವಿಶ್ವಕಪ್ ಆರಂಭವಾಗಲಿದೆ.
ಇದಕ್ಕಾಗಿ ಆಯ್ಕೆ ಮಾಡಿದ ತಂಡದಲ್ಲಿ ಶಮಿಗೆ ಸ್ಥಾನ ಸಿಕ್ಕಿಲ್ಲ. ಅವರು ಸ್ಟಾಂಡ್ ಬೈ ಆಟಗಾರರಾಗಿದ್ದಾರೆ.