ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಸುಮಾರು 80ಕ್ಕೂ ಅಧಿಕ ಕುಕ್ಕರ್ ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕುಣಿಗಲ್ ನ 22ನೇ ವಾರ್ಡ್ನಲ್ಲಿ ಅಧಿಕಾರಿಗಲು ವಶಕ್ಕೆ ಪಡೆದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಮಲ್ಲಿಪಾಳ್ಯದ ಬೆಟ್ಟಸ್ವಾಮಿಗೆ ಸೇರಿದ ಗೋದಾಮಿಗೆ ದಾಳಿ ನಡೆಸಿದ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಕುಕ್ಕರ್ ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ರಂಗನಾಥ್ ಭಾವಚಿತ್ರ ಇದೆ ಎನ್ನಲಾಗಿದೆ. ಟಿಸಿ ರಿಪೇರಿ ಮಾಡುವ ಗೋದಾಮಿನಲ್ಲಿ ಕುಕ್ಕರ್ ದಾಸ್ತಾನು ಮಾಡಿದ್ದರು. ಮ ಸಂಸದ ಡಿ.ಕೆ.ಸುರೇಶ್ರಿಂದ ಈ ಕುಕ್ಕರ್ಗಳನ್ನು ಹಂಚಲಾಗುತ್ತಿದೆ ಎನ್ನಲಾಗಿದೆ. ಸದ್ಯ ಈ ಕುರಿತು ದೂರು ದಾಖಲಿಸಿಕೊಳ್ಳಲಾಗಿದೆ.