ಭಾರತದ 10 ಅತ್ಯಂತ ಸುರಕ್ಷಿತ ರಾಜ್ಯಗಳು – ಕರ್ನಾಟಕಕ್ಕೆ ಎಷ್ಟನೇ ಸ್ಥಾನ..! Most Safe States In India

1 min read

ಭಾರತದ 10 ಅತ್ಯಂತ ಸುರಕ್ಷಿತ ರಾಜ್ಯಗಳು – ಕರ್ನಾಟಕಕ್ಕೆ ಎಷ್ಟನೇ ಸ್ಥಾನ..! Most Safe States In India

ವಿಶ್ವದ ಸುರಕ್ಷಿತ ದೇಶಗಳು, ಕ್ರೈಂ ರೇಟ್ ಬಹಳ ಕಡಿಮೆ ಇರುವ ಹಾಗೂ ಬಹುಮುಖ್ಯವಾಗಿ ಮಹಿಳೆಯರಿಗೆ ಸುರಕ್ಷಿತ ದೇಶಗಳ ಪಟ್ಟಿ ತೆಗೆದುಕೊಂಡ್ರೆ ನ್ಯೂಜಿಲ್ಯಾಂಡ್ , ನಾರ್ವೆ ಅಂತಹ ಕೆಲ ರಾಷ್ಟ್ರಗಳ ಹೆಸರುಗಳನ್ನ ನಾವು ಪಟ್ಟಿ ಮಾಡಬಹುದು. ಒಂದು ಇದಕ್ಕೆ ಕಾರಣ ಅಲ್ಲಿನ ಸಿಸ್ಟಮ್ ಮತ್ತೊಂದು ಎಜುಕೇಶನ್, ಲಿಟ್ರೆಸಿ. ಸಾಕ್ಷರತಾ ಪ್ರಮಾಣ 100 % ಇದ್ದಾಗ ಅಲ್ಲಿ ಕ್ರೈಂ ರೇಟ್ ಕಡಿಮೆ ಇರೋದ್ರಲ್ಲೂ ಆಶ್ಚರ್ಯ ಇಲ್ಲ.education saaksha tv. com

ಇದೇ ರೀತಿ ನಾವು ನಮ್ಮ ಭಾರತವನ್ನ ತೆಗೆದುಕೊಂಡ್ರೆ ಇಲ್ಲಿ ಬಹಳ ರಾಜ್ಯಗಳಲ್ಲಿ ಹೈಲಿ ಎಜುಕೇಟೆಡ್, ಸಾಕ್ಷರತಾ ಪ್ರಮಾಣ ಬಹಳ ಹೆಚ್ಚಿರುವ ರಾಜ್ಯಗಳಿವೆ. ಹಾಗೆಯೇ ಈ ರಾಜ್ಯಗಳು ತುಂಬಾ ಸುರಕ್ಷಿತ ಅಂತಾನೂ ಹೇಳಲಾಗಿದೆ. ಭಾರತದಲ್ಲಿ ಮತ್ತೊಂದೆಡೆ ಉತ್ತರಪ್ರದೇಶ, ಹರಿಯಾಣ, ದೆಹಲಿ, ಜಾರ್ಖಂಡ್ ಹೀಗೆ ಕೆಲ ರಾಜ್ಯಗಳಲ್ಲಿ ಕ್ರೈಂ ರೇಟ್ ಕೇಳಿದ್ರೆ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿದ್ದು, ಕಾನೂನು ವ್ಯವಸ್ಥೆ ಎಷ್ಟೇ ಕಠಿಣವಾಗಿದ್ರು ತಡೆಯೋದು ಕಷ್ಟವಾಗಿರಬಹುದು. ಇಂತಹ ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆ, ಅದ್ರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣ ಹೆಚ್ಚು. ಆದ್ರೆ ಕ್ರೈಂ ರೇಟ್ ಬಹಳ ಕಡಿಮೆ ಇರುವಂತಹ ಭಾರತದ ಟಾಪ್ 10 ರಾಜ್ಯಗಳ ಬಗ್ಗೆ ನಾವಿವತ್ತು ತಿಳಿಯೋಣ. ಯಾಕೆ ಈ ರಾಜ್ಯಗಳು ಸೇಫ್ ಅನ್ನೋ ಬಗ್ಗೆಯೂ ತಿಳಿಸುತ್ತೇವೆ.

ಈ ರಾಜ್ಯಗಳಲ್ಲಿ ಒಂದು ಸಾಕ್ಷರತಾ ಪ್ರಮಾಣವೂ ಹೆಚ್ಚಿದೆ. ಜನರು ವೆಲ್ ಎಜುಕೇಟೆಡ್ ಗಳು ಆಗಿರುವ ಜೊತೆಗೆ ಈ ರಾಜ್ಯಗಳು ವಿಶೇಷವಾಗಿ ಮಹಿಳೆಯರಿಗೆ ಸೇಫ್ ಅಂತಾನೆ ಹೇಳಲಾಗಿದೆ. ಈ ರಾಜ್ಯಗಳಲ್ಲಿ ಸಾಮಾನ್ಯ ಜನರು, ಮಹಿಳೆಯರ ಸೇಫ್ಟಿಗೆ ಮೊದಲನೇ ಆದ್ಯತೆ ನೀಡಲಾಗಿದೆ.

ಜಿವಿಐ ಇಂಡೆಕ್ಸ್ ನ ವರದಿಯ ಆದಾರದಲ್ಲಿ ಸುರಕ್ಷಿತ ರಾಜ್ಯಗಳ ಪಟ್ಟಿ ನೋಡೋದಾದ್ರೆ ( ಜಿವಿಐ ಇಂಡೆಕ್ಸ್ ಪ್ರತಿ ವರ್ಷ ಅಪರಾಧಗಳ ಪ್ರಮಾಣ , ಪ್ರಮುಖವಾಗಿ ಮಹಿಳೆಯರ ಮೇಲಿನ ದೌರ್ಜನ್ಯದ ಆಧಾರದ ಮೇಲೆ ನಡೆಸಲಾಗುವ ಸಮೀಕ್ಷೆಯ ವರದಿ) – ಈ ವರದಿಯಲ್ಲಿ ಹಿಂದಿನ ವರ್ಷಗಳ ಅಪರಾಧಗಳು ಹಾಗೂ ಈಗಿನ ಅಪರಾಧ ಪ್ರಮಾಗಳನ್ನೂ ತಾಳೆ ಹಾಕಿ ಬಳಿಕವೇ ರಿಪೋರ್ಟ್ ರಿಲೀಸ್ ಮಾಡಲಾಗುತ್ತದೆ. ಅಂದ್ರೆ ಜಿವಿಐ ರೇಟ್ ಹೆಚ್ಚಿದ್ದಷ್ಟು ಸುರಕ್ಷತಾ ಪ್ರಮಾಣ ಹೆಚ್ಚಾಗಿರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು.education saaksha tv. com

10. ತಮಿಳುನಾಡು
ಮಹಿಳೆಯರ ಸುರಕ್ಷತಾ ವಿಚಾರ ಅಂತ ಬಂದಾಗ ತಮಿಳುನಾಡು ಸೇಫ್ ಅಂತ ಹೇಳಬಹುದು. ಸಾಮಾನ್ಯ ಜನರಿಗೂ ಕೂಡ ಈ ರಾಜ್ಯ ಸುರಕ್ಷಿತ.
ಜಿವಿಐ ಇಂಡೆಕ್ಸ್ ನ ವರದಿ ಪ್ರಕಾರ ಈ ರಾಜ್ಯದಲ್ಲಿ ಜಿವಿಐ ರೇಟ್ – 0.582 ಇದೆ ಎನ್ನಲಾಗಿದೆ.
ಇಲ್ಲಿ ಕ್ರೈಂ ರೇಟ್ ಕಡಿಮೆಯಿರುವುದಕ್ಕೆ ಪ್ರಮುಖ ಸಾಕ್ಷರತಾ ಪ್ರಮಾಣ ಎಸ್ – ಈ ರಾಜ್ಯದ ಲಿಟ್ರೆಸಿ ರೇಟ್ 81 %

09. ಮಹಾರಾಷ್ಟ್ರ
ಇತ್ತೀಚೆಗೆ ನಡೆದ 11ಕ್ಕೂ ಅಧಿಕ ಏಜೆನ್ಸಿಗಳ ಸರ್ವೇ ಪ್ರಕಾರ ಮಹಿಳೆಯರಿಗೆ ವಿಶೇಷವಾಗಿ ರಾತ್ರಿ ವೇಳೆ ಅತ್ಯಂತ ಸೇಪ್ ರಾಜ್ಯ ಎಂದ್ರೆ ಅದು ಮುಂಬೈ ಎಂದೇ ಹೇಳಲಾಗಿದೆ. ಹೌದು. 3-4 ವರ್ಷಗಳ ಹಿಂದೆ ಈ ರಾಜ್ಯದಲ್ಲೂ ಅಪರಾಧಗಳ ಪ್ರಮಾಣ ಹೆಚ್ಚಿತ್ತು. ಆದ್ರೆ ಈಗ ಕಾನೂನು ವ್ಯವಸ್ಥೆಯನ್ನ ಬಿಗಿ ಮಾಡಲಾಗಿದೆ.
ಜಿವಿಐ ರೇಟ್ – 0.592
ಇಲ್ಲಿನ ಲಿಟ್ರೆಸಿ ರೇಟ್ – ಸುಮಾರು 80% ( ಕೇವಲ ಪುರುಷರ ಲಿಟ್ರೆಸಿ ರೇಟ್ ನೋಡುವುದಾದ್ರೆ 90%)

8. ಪಂಜಾಬ್
ಪಮಜಾಬ್ ಭಾರತದ ಅಭಿವೃದ್ಧಿ ಹೊಂದಿದ ಹಾಗೂ ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪೈಕಿ ಒಂದು. ಒಮದು ಪಂಜಾಬ್ ನ ಸಂಸ್ಕøತಿ ಮಹಿಳೆಯರಿಗೆ ಗೌರವ ನೀಡುವುದು, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದನ್ನ ಪ್ರೇರೇಪಿಸುತ್ತೆ. ಇದು ಒಂದು ಕಾರಣ ಇರಬಹುದು.
ಜಿವಿಐ ರೇಟ್ – 0.602
ಇಲ್ಲಿನ ಲಿಟ್ರೆಸಿ ರೇಟ್ – ಅಂದಾಜು 86 %

07. ಕರ್ನಾಟಕ
ನಮ್ಮ ರಾಜ್ಯ, ನಮ್ಮ ಹೆಮ್ಮೆಯ ಕರ್ನಾಟಕ 7ಕನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಕೀರ್ತಿಯೂ ನಮ್ಮ ರಾಜ್ಯಕ್ಕೆ ಇದೆ. ಜೊತೆಗೆ ಸುಂದರವಾದ , ಸಾಂಸ್ಕøತಿಕವಾಗಿ ಶ್ರೀಮಂತ ರಾಜ್ಯವೂ ಹೌದು. ಮತ್ತೊಂದು ಹೈಲೀ ಎಜುಕೇಟೆಡ್ಸ್. ಸಾಕ್ಷರತಾ ಪ್ರಮಾಣ ಹೆಚ್ಚು. ಹೆಚ್ಚು ವಿದ್ಯಾವಂತರು ನಮ್ಮ ರಾಜ್ಯದಲ್ಲಿ ಇರುವ ಕಾರಣಕ್ಕೆ ಕ್ರೈಂ ರೇಟ್ ಬಾರತದ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಬಹಳ ಕಡಿಮೆ ಇದೆ. ಇನ್ನೂ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯ ಮಹಿಳೆಯರಿಗೆ ಹೆಚ್ಚು ಸೇಫ್ ಅಂತ ಹೇಳಲಾಗಿದೆ.
ಜಿವಿಐ – 0.603
ಲಿಟ್ರೆಸಿ ರೇಟ್ – ಅಂದಾಜು 87 -88 %


06. ಹಿಮಾಚಾಲ ಪ್ರದೇಶ
ಹಿಮಾಲಯದ ತಪ್ಪಲಲ್ಲಿ ಇರುವ ಹಿಮಾಚಲ ಪ್ರದೇಶ ವಿಶೇಷವಾಗಿ ತನ್ನ ಸೌಂದರ್ಯ , ಪ್ರಕೃತಿಗೆ ಫೇಮಸ್.
ಇಲ್ಲಿ ಲಿಟ್ರೆಸಿ ರೇಟ್ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆಯಿದೆ. ಆದ್ರೆ ಇಲ್ಲಿನ ಪುರುಷರ ಲಿಟ್ರೆಸಿ ರೇಟ್ 93 % ಇದೆ.
ಆದ್ರೂ ಈ ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಿದೆ. ವಿಸೇಷವಾಗಿ ಮಹಿಳೆಯರಿಗೆ ಈ ರಾಜ್ಯ ಬಹಳ ಸೇಫ್.
ಜಿವಿಐ ರೇಟ್ -0.604

05. ಮಣಿಪುರ
ವಿಭಿನ್ನ ಸಂಸ್ಕøತಿ, ಸುಂದರ ಪ್ರಕೃತಿಯಿಂದಲೇ ಈ ರಾಜ್ಯ ಫೇಮಸ್. ಈ ರಾಜ್ಯದಲ್ಲಿ ವಿಶೇಷವಾಗಿ ಇಲ್ಲಿನ ಸಂಸ್ಕøರತಿ ಮಹಿಳೆಯರಿಗೆ ಗೌರವಿಸುವುದನ್ನ ಕಲಿಸುತ್ತೆ.
ಜಿವಿಐ ರೇಟ್ -0.610
ಲಿಟ್ರೆಸಿ ರೇಟ್ – ಅಂದಾಜು 88 %

04. ಸಿಕ್ಕಿಂ
ಸಂಸ್ಕøತಿಯಿಂದ ಜನರಿಗೆ ಹತ್ರತಿರವಾಗಿರುವ ಈ ರಾಜ್ಯ ಸುಂದರತೆಗೆ ಫೇಮಸ್ ಕೂಡ.

ಜಿವಿಐ ರೇಟ್ -0.614
ಲಿಟ್ರೆಸಿ ರೇಟ್ – ಅಂದಾಜು 85 %

03. ಮಿಜೋರೋಮ್
ಜಿವಿಐ ರೇಟ್ -0.627
ಲಿಟ್ರೆಸಿ ರೇಟ್ – ಅಂದಾಜು 91 %

02. ಕೇರಳ
ನಮ್ಮ ಕರ್ನಾಟಕದ ನೆರೆ ರಾಜ್ಯ ಕೇರಳದಲ್ಲಿ ಅತಿ ಹೆಚ್ಚು ಜನ ವಿದ್ಯಾವಂತರಿದ್ದರೆ. ಇಲ್ಲಿ ವಿಶೇಷವಾಗಿ ಗಮನಿಸೋದಾದ್ರೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ತುಂಬಾನೆ ಕಡಿಮೆಯಿದೆ.
ಜಿವಿಐ ರೇಟ್ -0.634
ಲಿಟ್ರೆಸಿ ರೇಟ್ – ಅಂದಾಜು 93-94 %

01. ಗೋವಾ
ಯುವಕರ ಫೇವರೇಟ್ ಸ್ಥಳ ಗೋವಾ. ಸೇಫ್ಟಿಯ ವಿಚಾರದಲ್ಲಿಯೂ ಗೋವಾ ನಂಬರ್ 1. ಇಲ್ಲಿ ಮಹಿಳೆಯರಿಗೆ ರಾತ್ರಿ ವೇಳೆಯೂ ಅತ್ಯಂತ ಸುರಕ್ಷಿತ ಅಂತ ಹೇಳಲಾಗುತ್ತೆ.

ಜಿವಿಐ ರೇಟ್ -0.656
ಲಿಟ್ರೆಸಿ ರೇಟ್ – ಅಂದಾಜು 93 %


ಈ ರಾಜ್ಯಗಳಲ್ಲಿ ಅಪರಾಧಗಳು ನಡೆಯುವೇ ಇಲ್ಲ ಎಂದೇನಿಲ್ಲ. ಆದ್ರೆ ಜಿವಿಐ ರೇಟ್ ನ ಅನುಸಾರ ಈ ರಾಜ್ಯಗಳಲ್ಲಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಅಪರಾಧಗಳು ತುಂಬಾನೆ ಕಡಿಮೆ. ಇದಕ್ಕೆ ಪ್ರಮುಖ ಕಾರಣ ಲಿಟ್ರೆಸಿ ರೇಟ್ ಮತ್ತು ಸಂಸ್ಕoತಿ.

ಭಾರತದ ಅತ್ಯಂತ ಅಪಾಯಕಾರಿ ರಾಜ್ಯಗಳು..! MOST Dangerous States in India

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd