ಮಂಡ್ಯದಲ್ಲಿ ನದಿಗೆ ಹಾರಿ ತಾಯಿ-ಮಗಳ ಆತ್ಮಹತ್ಯೆ..! suicide saaksha tv
ಮಂಡ್ಯ : ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ನಲ್ಲಿ ನಡೆದಿದೆ.
ಭಾರ್ಗವಿ(32), ದೀಕ್ಷಾ (03) ಮೃತ ದುರ್ದೈವಿಗಳಾಗಿದ್ದು, ಇವರು ಪಾಂಡವಪುರ ತಾಲೂಕಿನ ಲಕ್ಷ್ಮಿ ಸಾಗರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಶ್ರೀರಂಗಪಟ್ಟಣದ ದೇವೇಗೌಡನಕೊಪ್ಪಲು ಗ್ರಾಮದ ಪ್ರದೀಪ್ ಕುಮಾರ್ ಜೊತೆ ಭಾರ್ಗವಿ ವಿವಾಹವಾಗಿದ್ದು, ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಿದ್ದರು.
ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗ್ತಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆ ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾವೇರಿ ನದಿಯಲ್ಲಿ ತಾಯಿ-ಮಗು ಶವ ತೇಲುತಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸ ರಿಗೆ ಮಾಹಿತಿ ನೀಡಿದ್ದಾರೆ.