ಒಂದೇ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳಸಿದ್ದ ತಾಯಿ – ಮಗಳು : ಬುದ್ದಿವಾದ ಹೇಳಿದ ತಂದೆ ಕೊಲೆ..!

1 min read
kasaragudu

ಒಂದೇ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳಸಿದ್ದ ತಾಯಿ – ಮಗಳು : ಬುದ್ದಿವಾದ ಹೇಳಿದ ತಂದೆ ಕೊಲೆ..!

ದಾವಣಗೆರೆ: ತಾಯಿ ಹಾಗೂ ಮಗಳು ಇಬ್ಬರೂ ಒಂದೇ ವ್ಯಕ್ತಿಯ ಜೊತೆಗೆ ಪರಸ್ಪರ ಒಪ್ಪಿಗೆಯಿಂದಲೇ ದೈಹಿಕ ಸಂಬಂಧ ಬೆಳಸಿದ್ದರು. ಆದ್ರೆ ಇದು ತಪ್ಪು ಸರಿದಾರಿಗೆ ಬನ್ನಿ ಎಂದು ಬುದ್ದಿವಾದ ಹೇಳಿದಕ್ಕೆ ತಾಯಿ ಮಗಳು ಸೇರಿ 70 ವರ್ಷದ ವೃದ್ಧ ತಂದೆಯನ್ನ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಮಂಜಪ್ಪ ಕೊಲೆಯಾದ ವ್ಯಕ್ತಿಯಾಗಿದ್ದಾರೆ.

ಪ್ರಕರಣದ ವಿವರಣೆ

ಮಂಜಪ್ಪ ಅವರ ಮಗಳು ಉಷಾ ಎಂಬಾಕೆ ತನ್ನ ಗಂಡನನ್ನ ಬಿಟ್ಟು ಮಗಳು ಸಿಂಧು ಜೊತೆಗೆ ಆತನ (ತವರುಮನೆ) ಮನೆಯಲ್ಲೇ ವಾಸವಾಗಿದ್ದರು. ಈ ನಡುವೆ ಉಷಾಗೆ ಅದೇ ಊರಿನ ದೈಹಿಕ ಶಿಕ್ಷಕನ  ಮೇಲೆ ಲವ್ ಆಗಿದೆ.  ಆತನು ವಿವಾಹಿತನಾಗಿದ್ದು ಇಬ್ಬರು ಮಕ್ಕಳಿದ್ದಾರೆ.  ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅಮ್ಮನ ನಡವಳಿಕೆ ನೋಡುತ್ತಾ ಮಗಳು ಕೂಡ ಅದೇ ಹಾದಿ ಹಿಡಿದಿದ್ದಾಳೆ.

ಮಗಳು ಕೂಡ ಶಿಕ್ಷಕನೊಂದಿಗೆ ಸಂಬಂಧ ಬೆಳೆಸಿದ್ದಾಳೆ.  ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಮಂಜಪ್ಪ ಮಗಳು ಉಷಾ ಮತ್ತು ಮೊಮ್ಮಗಳು ಸಿಂಧುಗೆ ಬುದ್ದಿವಾದ  ಹೇಳಿದ್ದಾರೆ.  ಆದ್ರೆ ಇದರಿಂದ ಆಕ್ರೋಶಗೊಂಡ ತಾಯಿ ಮಗಳು ಸೇರಿ  ಮಂಜಪ್ಪನನ್ನು ಕೊಲೆ ಮಾಡಿದ್ದಾರೆ.

15 ದಿನಗಳ ಹಿಂದೆ ಉಷಾ ಸಿಂಧು ಹಾಗೂ ದೈಹಿಕ ಶಿಕ್ಷಕ ಸೇರಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಂಜಪ್ಪನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ  ಮೃತದೇಹವನ್ನು ನಾಲೆಗೆ ಎಸೆದಿದ್ದಾರೆ. ಇದಾದ ನಂತರ ಕಾಲು ಜಾರಿ ಬಿದ್ದಿದ್ದಾರೆ ಎಂದೆ ಕಥೆ ಕಟ್ಟಿ ಡ್ರಾಮಾ ಮಾಡಿದ್ದಾರೆ. ಆದ್ರೆ ಮೃತದೇಹದ ಸ್ಥಿತಿ ನೋಡಿ ಅನುಮಾನ ಬಂದಿದ್ದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದರು. ಬಳಿಕ ಅಸಲಿ ಸತ್ಯ ಗೊತ್ತಾಗಿದ್ದು,ಮೂವರನ್ನೂ ಅರೆಸ್ಟ್ ಮಾಡಿದ್ದಾರೆ. ಅಲ್ದೇ ಆರೋಪಿಗಳು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ಧಾರೆ.

ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಗಳ ಜೊತೆ ಎಂಟ್ರಿಯಾದ ಯುವತಿ..!

ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!

ತಂದೆ ಹೇರ್ ಕಟ್ ಮಾಡಿಸಿಕೊಳ್ಳುವಂತೆ ಗದರಿದ್ದಕ್ಕೆ ಮಗ ಹೀಗಾ ಮಾಡೋದು..!

ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd