ತನ್ನ ಮಗನನನ್ನೇ ಪೆಟ್ರೋಲ್ (Petrol) ನಿಂದ ಎರಚಿ ಸುಟ್ಟು ಹಾಕಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಚಾಂದ್ ಪಾಷಾ (40) ಕೊಲೆಯಾಗಿರುವ ವ್ಯಕ್ತಿ. ಪ್ರತಿನಿತ್ಯ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ. ಈತನ ರ್ವನೆಯಿಂದ ಬೇಸತ್ತ ಪತ್ನಿ ಬಿಟ್ಟು ಹೋಗಿದ್ದರು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸಿಸುತ್ತಿದ್ದ.
ಈತ ಪ್ರತಿದಿನದಂತೆ ಕುಡಿದುಕೊಂಡು ಬಂದು ತಾಯಿ ಜೊತೆ ಗಲಾಟೆ ಮಾಡಿದ್ದಾನೆ. ನಂತರ ಸಂಜೆ 4:45ರ ಸುಮಾರಿಗೆ ಮತ್ತೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದ. ಈ ಸಂದರ್ಭದಲ್ಲಿ ತಾಯಿ ಆತನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಕೊಟ್ಟಿದ್ದಾರೆ
ಘಟನೆ ಕುರಿತು ಆರೋಪಿ ತಾಯಿ ಸೂಫಿಯಾಳನ್ನ ಪೊಲೀಸರು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ