ಮಗಳ ಕೊಳೆತ ಶವದ ಜೊತೆ ನಾಲ್ಕು ದಿನ ಕಳೆತ ತಾಯಿ….
ಮಂಡ್ಯ- ಕಳೆದ ನಾಲ್ಕು ದಿನಗಳಿಂದ ಮಗಳ ಮೃತ ದೇಹದ ಜೊತೆ ತಾಯಿ ವಾಸವಿದ್ದ ಭಯಾನಕ ಘಟನೆ ಮಂಡ್ಯ ನಗರದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ನಡೆದಿದೆ.
ಸುಮಾರು 30 ವರ್ಷದ ರೂಪ ಎಂಬುವರು ನಾಲ್ಕು ದಿನಗಳ ಹಿಂದಯೇ ಮೃತಪಟ್ಟಿದ್ದು, ಮಗಳ ಸಾವಿನ ವಿಚಾರ ಯಾರಿಗೂ ತಿಳಿಸದ ತಾಯಿ ನಾಗಮ್ಮ ಶವದ ಜೊತೆಯೇ ನಾಲ್ಕು ದಿನ ಕಳೆದಿದ್ದಾರೆ. ನಿನ್ನೆ(ಸೋಮವಾರ) ಈ ಘಟನೆ ಬೆಳಕಿಗೆ ಬಂದಿದೆ.
4 ದಿನಗಳಿಂದ ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಯಾವಾಗ ನಾಗಮ್ಮ ಮತ್ತು ರೂಪ ಮನೆಯಿಂದ ಹೊರಬರದೆ ಇದ್ದಾಗ ಅನುಮಾನಗೊಂಡಿದ್ದಾರೆ. ಬಳಿಕ ಮಿಕ್ಸಿ ರಿಪೇರಿಗೆಂದು ಬಂದವನನ್ನ ಕರೆದು ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದರು. ಮೃತಪಟ್ಟ ರೂಪಾಳ ಶವದ ಜೊತೆ ನಾಗಮ್ಮ ಕುಳಿತಿದ್ದಳು.
ಸ್ಥಳಿಯರು ಈ ವಿಷಯವನ್ನ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ರೂಪ ಸಾವಿಗೆ ಕಾರಣ ಮಾತ್ರ ಇನ್ನು ತಿಳಿದು ಬಂದಿಲ್ಲ. ಸದ್ಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು. ಶವಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.