MotoE22s ಇಂದು ಭಾರತದಲ್ಲಿ ಬಿಡುಗಡೆ… ಫೀಚರ್ಸ್ ಏನಿದೆ ? ಓದಿ..
ಬಹು ನಿರೀಕ್ಷಿತ MotoE22s ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 17 ಅಂದರೇ ಇಂದು ಬಿಡುಗಡೆ ಮಾಡುತ್ತಿರುವುದಾಗಿ Motorola ತನ್ನ ವೆಬ್ ಸೈಟ್ ನಲ್ಲಿ ಹೇಳಿದೆ.
Moto E22s ಕಂಪನಿಯ ಬಜೆಟ್ ಮೊಬೈಲ್ ಆಗಿದ್ದು, ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಸಿಗಲಿದೆ. ಹೊಸ ಸ್ಮಾರ್ಟ್ ಫೋನ್ ನ ವಿನ್ಯಾಸ ಮತ್ತು ಪ್ರಮುಖ ವಿಶೇಷತೆಗಳನ್ನ ಮೊಟೊರೊಲಾ ತನ್ನ ವೆಬ್ ಸೈಟ್ ನಲ್ಲಿ ಬಹಿರಂಗಪಡಿಸಿದೆ.
Moto E22s ಒಂದೇ ಮಾದರಿಯಲ್ಲಿ ಲಭ್ಯವಿರುತ್ತದೆ. ಅಕ್ಟೋಬರ್ 22, ಮಾರಾಟಕ್ಕೆ ಲಭ್ಯವಿರಲಿದೆ. ಫ್ಲಿಪ್ಕಾರ್ಟ್ ದೀಪಾವಳಿ ಆಫರ್ ನಲ್ಲಿ ಖರೀದಿದಾರರು ಹೊಸ Moto E22s ನಲ್ಲಿ ಭಾರಿ ರಿಯಾಯಿತಿಯನ್ನ ಪಡೆಯಬಹುದು.
Moto E22s ಆರ್ಕ್ಟಿಕ್ ಬ್ಲೂ ಮತ್ತು ಇಕೋ ಬ್ಲಾಕ್ ಎರಡು ಬಣ್ಣ ಲಭ್ಯವಿರುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ರೀಡರ್ ನ್ನ ನೀಡಲಾಗಿದೆ.
Moto E22s ಫೀಚರ್ಸ್
Moto E22s 6.5-ಇಂಚಿನ IPS LCD ಡಿಸ್ಪ್ಲೆ ನೀಡಲಾಗಿದ್ದು, 1600x22s0 ಪಿಕ್ಸೆಲ್ ರೆಸಲ್ಯೂಶನ್ ನಲ್ಇ 90Hz ರಿಫ್ರೆಶ್ ರೇಟ್ ಹೊಂದಿದೆ.
ಮೀಡಿಯಾ ಟೆಕ್ ಹೆಲಿಯೊ G37 SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OS ಜೊತೆಗೆ ಮೊಟೊರೊಲಾ ಕಂಪೆನಿಯ My UXನಲ್ಲಿ ರನ್ ಆಗಲಿದೆ.
4GB RAM ಮತ್ತು 64GB ಇಂಟರ್ ಸ್ಟೋರೇಜ್ ಜೊತೆಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ಅನ್ನ 1TB ವರೆಗೆ ವಿಸ್ತರಿಸಿಕೊಳ್ಳಬಹುದು.
ಕ್ಯಾಮೆರಾ ವಿಚಾರಕ್ಕೆ ಬಂದರೆ 16MP ಪ್ರೈಮರಿ ಸೆನ್ಸಾರ್ ಮತ್ತು 2MP ಡೀಪ್ ಸೆನ್ಸರ್ ನೊಂದಿಗೆ ಡ್ಯೂಯಲ್ ಕ್ಯಾಮೆರಾ ನೀಡಲಾಗಿದೆ. ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.
Moto E22s 10W ಚಾರ್ಜಿಂಗ್ಗೆ ಸಪೋರ್ಟ್ ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
Motorola Moto E22s to launch in India today, here’s what we know about the smartphone