FILM | ಸಿನಿ ಪ್ರೇಮಿಗಳಿಗೆ ಸಾಲು ಸಾಲು ಸಿನಿಮಾ
ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ರಿಲೀಸ್
ಕೌಟುಂಬಿಕ ಕಥೆಯುಳ್ಳ ಬೆಂಕಿ ಸಿನಿಮಾ ರಿಲೀಸ್
ನಿಗೂಢ ಥ್ರಿಲ್ಲರ್ ಕತೆಯ ಚೇನ್ ಸಿನಿಮಾ ಬಿಡುಗಡೆ
ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾ ಇಂದು ರಿಲೀಸ್
ಬೆಂಗಳೂರು : ಇಂದು ಸ್ಯಾಂಡಲ್ ವುಡ್ ನಲ್ಲಿ ಭಿನ್ನ, ವಿಭಿನ್ನ ಸಿನಿಮಾಗಳು ರಿಲೀಸ್ ಆಗಿವೆ.
ಇಂದು ಹೊಸಬರ ಹಲವು ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಎಂಟ್ರಿಯಾಗಿವೆ.
ಸತೀಶ್ ನೀನಾಸಂ, ಹರಿಪ್ರಿಯ, ನಾಗಭೂಷಣ್ ಇನ್ನಿತರರು ನಟಿಸಿರುವ ಪೆಟ್ರೊಮ್ಯಾಕ್ಸ್ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಿನಿಮಾಗೆ ವಿಜಯ್ ಪ್ರಸಾದ್ ನಿರ್ದೇಶನವಿದೆ.
ಈ ಸಿನಿಮಾ ಜೊತೆಗೆ ಕೌಟುಂಬಿಕ ಕತೆಯುಳ್ಳ ಸಿನಿಮಾ ಬೆಂಕಿ ಇಂದು ರಿಲೀಸ್ ಆಗಿದೆ.
ಇದಕ್ಕೆ ಶಾನ್ ನಿರ್ದೇಶನವಿದ್ದು, ಅನೀಶ್ ನಾಯಕ ನಟರಾಗಿದ್ದಾರೆ.
ಅಲ್ಲದೇ ಸೈಕೋಪಾಥ್ ಹಂತಕ, ಪೊಲೀಸ್ ಹಾಗೂ ಇನ್ನಿತರ ಪಾತ್ರಗಳ ನಡುವೆ ಸಾಗುವ ನಿಗೂಢ ಥ್ರಿಲ್ಲರ್ ಕತೆಯ ಚೇಸ್ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ವಿಲೋಕ್ ಶೆಟ್ಟಿ ನಿರ್ದೇಶನವಿದೆ.
ಇನ್ನು ಹೊಸಬರೇ ಕೂಡಿ ಮಾಡಿರುವ ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾ ಕೂಡ ಇಂದು ರಿಲೀಸ್ ಆಗಿದ್ದು, ಹರಿ ಆನಂದ್ ನಿರ್ದೇಶನವಿದ್ದು, ರಮೇಶ್ ರಾಮಯ್ಯ ನಿರ್ಮಾಣ ಮಾಡಿದ್ದಾರೆ.
ಇದರ ಜೊತೆಗೆ ಮಿಥುನ್ ಚಂದ್ರಶೇಖರ್ ನಿರ್ದೇಶನದ ಪದ್ಮಾವತಿ ಸಿನಿಮಾ ರಿಲೀಸ್ ಆಗಿದೆ.
ಇದು ಆಕ್ಷನ್ ಭರಿತ ಪ್ರೇಮಕಥೆಯಾಗಿದೆ. ಹಾಗೇ ಓಹ್ ಮೈ ಲವ್ ಎಂಬ ಟೈಟಲ್ ನಲ್ಲಿ ಕಾಲೇಜು ಪ್ರೇಮಕಥೆ ಹೇಳುವ ಸಿನಿಮಾ ಕೂಡ ರಿಲೀಸ್ ಆಗಿದೆ.
ಈ ಸಿನಿಮಾಗಳಿಗೆ ಪ್ರೇಕ್ಷಕರಿಂದ ಇಂದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು, ನಾಳೆ ನಾಡಿದ್ದು ಹೇಗೆ ಸಾಗಲಿದೆ ಅನ್ನೋದನ್ನ ಕಾದು ನೋಡಬೇಕು.