ಬೆಂಗಳೂರು: ಬಳ್ಳಾರಿಯ (Bellary) ಬಿಜೆಪಿ ಸಂಸದ ದೇವೇಂದ್ರಪ್ಪ (MP Devendrappa) ಪುತ್ರನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಪ್ರೀತಿಯ ಹೆಸರಿನಲ್ಲಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಯುವತಿಯೊಬ್ಬರು ಈ ಕುರಿತು ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ (Mysuru) ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ (Ranganath) ಯುವತಿಗೆ ವಂಚಿರಿಸುವ ಆರೋಪ ಕೇಳಿ ಬಂದಿದೆ. ಈ ಕುರಿತು ಬೆಂಗಳೂರು ಮೂಲದ ಯುವತಿ ಆರೋಪಿಸಿದ್ದು, ಇತ್ತೀಚೆಗೆ 42 ವರ್ಷದ ರಂಗನಾಥ್ ಗೆ 24 ವರ್ಷದ ಯುವತಿಯ ಪರಿಚಯವಾಗಿದೆ. ಆಗ ಯುವತಿಯೊಂದಿಗೆ ರಂಗನಾಥ್ ಲವ್ವಿಡವ್ವಿ ಶುರುಮಾಡಿದ್ದರು ಎಂಬ ಆರೋಪ ಬಂದಿದೆ.
ಮೈಸೂರಿನ ಖಾಸಗಿ ಹೋಟೇಲ್ ಒಂದರಲ್ಲಿ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಯುವತಿ ರಂಗನಾಥ್‌ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು ಎನ್ನಲಾಗಿದೆ. ಆ ನಂತರ ರಂಗನಾಥ್ ಯುವತಿಯನ್ನು ಕಡೆಗಣಿಸಲು ಪ್ರಾರಂಭಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿ ರಂಗನಾಥ್ ವಿಚಾರವನ್ನು ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾಳೆ. ಆದರೆ ಯುವತಿಯ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದಾರೆ. ಆ ನಂತರ ಅವರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.