ಧೋನಿ ಕಮ್ ಬ್ಯಾಕ್‍ಗೆ ಐಪಿಎಲ್ ಮಾನದಂಡವಾಗಲ್ಲ – ಆಶೀಷ್ ನೆಹ್ರಾ
ಟೀಮ್ ಇಂಡಿಯಾ ಪರ ಧೋನಿ ಕೊನೆಯ ಪಂದ್ಯವನ್ನಾಡಿದ್ದಾರೆ. ಮುಂದೆ ಏನಿದ್ರೂ ಅವರ ಅಂತಿಮ ನಿರ್ಧಾರದ ಘೋಷಣೆ ಮಾತ್ರ ಬಾಕಿ ಇದೆ ಎಂದು ಟೀಮ್ ಇಂಡಿಯಾದ ಮಾಜಿ ವೇಗಿ ಆಶೀಷ್ ನೆಹ್ವಾ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿಲ್ಲ. ಆದ್ರೂ ಧೋನಿ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ. ಟಿ-ಟ್ವೆಂಟಿ ವಿಶ್ವಕಪ್ ನಂತರ ಧೋನಿ ವಿದಾಯ ಹೇಳ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಕೋವಿಡ್ ನಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಲಾಗಿದೆ. ಇದೀಗ ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ನಲ್ಲಿ ಆಡಲಿದ್ದಾರೆ.
ನನ್ನ ಪ್ರಕಾರ ಧೋನಿ ಟೀಮ್ ಇಂಡಿಯಾ ಪರ ತನ್ನ ಕೊನೆಯ ಪಂದ್ಯವನ್ನು ಆಡಿದ್ದಾರೆ. ಎಂ.ಎಸ್. ಧೋನಿ ಸಾಬೀತುಪಡಿಸಲು ಏನು ಉಳಿದಿಲ್ಲ. ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ನಾವು ಅವರ ಬಗ್ಗೆ ಚರ್ಚೆ ಮಾಡುತ್ತೇವೆ. ಮಾತನಾಡುತ್ತೇವೆ. ಯಾಕಂದ್ರೆ ಅವರು ಇನ್ನೂ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರೇ ಹೇಳಬೇಕು ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ನೋಡಿದಾಗ ಈ ಐಪಿಎಲ್ ಟೂರ್ನಿ ಏನು ಅಲ್ಲ. ನಾಯಕನಾಗಿರಿ, ಆಯ್ಕೆಗಾರನಾಗಿರಿ ಅಥವಾ ಧೋನಿ ಆಡಲು ಸಿದ್ದರಿದ್ರೂ ನನಗೆ ಅವರು ಲೀಸ್ಟ್ ನ ಮೊದಲ ಸ್ಥಾನದಲ್ಲಿರುತ್ತಾರೆ ಅಂತಾರೆ ನೆಹ್ರಾ. ನೆಹ್ರಾ ಅವರು ಧೋನಿಯ ನಾಯಕತ್ವದಲ್ಲಿ ಆಡಿದ್ದಾರೆ. ಸದ್ಯ ರಾಯಲ್ ಚಾಲೆಂಜರ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.
ನನಗೆ ಯಾವತ್ತಿಗೂ ಎಂ.ಎಸ್. ಧೋನಿಯ ಆಟ ಕುಗ್ಗಿಲ್ಲ ಅಂತ ಅನ್ನಿಸುತ್ತಿದೆ. 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರನೌಟ್ ಆಗುವ ತನಕ ಧೋನಿ ಟೀಮ್ ಇಂಡಿಯಾವನ್ನು ಗೆಲ್ಲಿಸಿ ಫೈನಲ್‍ಗೆ ತಲುಪಿಸುತ್ತಾರೆ ಎಂದು ಅಂದುಕೊಂಡಿದ್ದರು. ರನೌಟ್ ಆದ ಬಳಿಕ ಎಲ್ಲರ ನಿರೀಕ್ಷೆಗಳು ಹುಸಿಗೊಳಿಸಿದ್ದವು ಎಂದ ನೆಹ್ರಾ, ಟೀಮ್ ಇಂಡಿಯಾಗೆ ಮತ್ತೆ ಕಮ್ ಬ್ಯಾಕ್ ಮಾಡಲು ಐಪಿಎಲ್ ಧೋನಿಗೆ ಮಾನದಂಡವಾಗಬಹುದೇ ಎಂಬ ಪ್ರಶ್ನೆಗೆ ಈ ಹೀಗೆ ಉತ್ತರಿಸುತ್ತಾರೆ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅವರಿಗೆ ಗೊತ್ತು. ಯುವ ಆಟಗಾರರಿಗೆ ಹೇಗೆ ಬೆಂಬಲ – ಪ್ರೋತ್ಸಾಹ ನೀಡಬೇಕು ಎಂಬುದು ಸಹ ಗೊತ್ತು ನಾನು ಪದೇ ಪದೇ ಹೇಳಿದ್ದನ್ನೇ ಹೇಳಲು ಇಷ್ಟಪಡುವುದಿಲ್ಲ. ನನಗೆ ಐಪಿಎಲ್ ಟೂರ್ನಿಯಲ್ಲಿ ಧೋನಿಯ ಆಯ್ಕೆಗೆ ಮಾನದಂಡವಾಗುತ್ತೆ ಅಂತ ಅನ್ನಿಸುವುದಿಲ್ಲ ಎಂದು ಆಶಿಷ್ ನೆಹ್ರಾ ಹೇಳಿದ್ದಾರೆ.