ಗುರುವಿಗೆ ಪ್ರವೇಶವಿಲ್ಲ ಅಂದ ಮೇಲೆ ನಮಗೂ ಬೇಡ… ಇದು ಗುರು ಗ್ಯಾರಿ ಮೇಲಿದ್ದ ಧೋನಿಯ ನಿಷ್ಠೆ..!
ಇವತ್ತು ವಿಶ್ವ ಕ್ರಿಕೆಟ್ ಹಾಗೂ ಜನರು ಮಹೇಂದ್ರ ಸಿಂಗ್ ಧೋನಿಯವರನ್ನು ಗ್ರೇಟ್ ಲೀಡರ್ ಅಂತ ಕರೆಯುತ್ತಾರೆ. ಆದ್ರೆ ಇದಕ್ಕೆ ಪ್ರಮುಖ ಕಾರಣ ಮಹೇಂದ್ರ ಸಿಂಗ್ ಧೋನಿಯವರಲ್ಲಿರುವ ನಿಷ್ಠೆ. ನಾನು ಅನೇಕ ಜನರನ್ನು ಭೇಟಿ ಮಾಡಿದ್ದೇನೆ. ನಾನು ಭೇಟಿಯಾದ ಪ್ರಭಾವಶಾಲಿಗಳಲ್ಲಿ ಧೋನಿ ಕೂಡ ಒಬ್ಬರು. ನನಗೆ ಅವರಲ್ಲಿರುವ ನಿಷ್ಠೆ ತುಂಬಾನೇ ಹೆಮ್ಮೆ ಮೂಡುವಂತೆ ಮಾಡಿತ್ತು ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.
2011ರ ವಿಶ್ವಕಪ್ ಟೂರ್ನಿಗೂ ಮುನ್ನ ನಡೆದಿದ್ದ ಒಂದು ಘಟನೆಯನ್ನು ಗ್ಯಾರಿ ಕಸ್ಟರ್ನ್ ನೆನಪು ಮಾಡಿಕೊಂಡಿದ್ದಾರೆ. ತನ್ನ ಗುರುವಿಗಾಗಿ ಧೋನಿ ಇಡೀ ತಂಡದ ಕಾರ್ಯಕ್ರಮವೊಂದನ್ನೇ ರದ್ದುಗೊಳಿಸಿದ್ದಾರೆ. ಯಾಕಂದ್ರೆ ಆ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಮಾತ್ರ ಆಹ್ವಾನವಿತ್ತು. ಆದ್ರೆ ತಂಡದಲ್ಲಿರುವ ವಿದೇಶಿ ಸಿಬ್ಬಂದಿಗಳಿಗೆ ಅವಕಾಶವಿರಲಿಲ್ಲ. ಹೀಗಾಗಿ ಧೋನಿ ಅಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ತನ್ನ ನಿಷ್ಠೆಯನ್ನು ಮೆರೆದಿದ್ದಾರೆ ಎಂದು ಕಸ್ಟರ್ನ್ ಹೇಳಿದ್ದಾರೆ.
ನಾನು ಆ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ. ಟೀಮ್ ಇಂಡಿಯಾಗೆ ಬೆಂಗಳೂರಿನ ಫ್ಲೈಟ್ ಸ್ಕೂಲ್‍ಗೆ
ಭೇಟಿ ನೀಡುವ ಕಾರ್ಯಕ್ರಮವೊಂದು ಇತ್ತು. ತಂಡದ ಸಿಬ್ಬಂದಿಗಳಲ್ಲಿ ಮೂರು ನಾಲ್ಕು ಮಂದಿ ವಿದೇಶಿ ಸಿಬ್ಬಂಧಿಗಳಿದ್ದರು. ಬೆಳಗ್ಗೆ ಇಡೀ ತಂಡವೇ ಭೇಟಿ ನೀಡುವಂತಹ ಅವಕಾಶವಿತ್ತು. ಪ್ರತಿಯೊಬ್ಬರು ಅದನ್ನು ಎದುರು ನೋಡುತ್ತಿದ್ದರು. ಆದ್ರೆ ಫ್ಲೈಟ್ ಸ್ಕೂಲ್‍ಗೆ ತಂಡದ ವಿದೇಶಿ ಸಿಬ್ಬಂದಿಗಳಿಗೆ ಪ್ರವೇಶವನ್ನು ನಿರಾಕರಿಸಲಾಯ್ತು. ಕೆಲವೊಂದು ಭದ್ರತಾ ನಿಯಮಗಳು ಇರುವುದರಿಂದ ಪ್ರವೇಶ ನೀಡಿರಲಿಲ್ಲ. ಆದ್ರೆ ಎಮ್.ಎಸ್. ಇಡೀ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದರು. ಇವರೆಲ್ಲಾ ನನ್ನ ಮಂದಿ. ಅವರಿಗೆ ಪ್ರವೇಶ ಇಲ್ಲ ಅಂದ ಮೇಲೆ ನಾವು ಬರುವುದಿಲ್ಲ. ಇದು ಧೋನಿಯ ನಿಷ್ಠೆ ಎಂದು ಗ್ಯಾರಿ ಕಸ್ಟರ್ನ್ ಅವರು ಧೋನಿಯವರ ನಿಷ್ಠೆಯನ್ನು ಗುಣಗಾನ ಮಾಡಿದ್ದಾರೆ.
2007ರ ವಿಶ್ವಕಪ್ ಗೆಲುವಿನ ನಂತರ ಮಹೇಂದ್ರ ಸಿಂಗ್ ಧೋನಿಯವರು ಹಿರಿಯ ಆಟಗಾರರ ವಿಶ್ವಾಸವನ್ನೂ ಗಳಿಸಿಕೊಂಡಿದ್ದರು. ಡ್ರೆಸಿಂಗ್ ರೂಂನ ವಾತಾವರಣವೂ ಚೆನ್ನಾಗಿತ್ತು. 27 ವರ್ಷದ ನಾಯಕನೊಂದಿಗೆ ದೀರ್ಘಕಾಲ ದೊಂದಿಗೆ ಬಲಿಷ್ಠ ತಂಡವಾಗಿಸುವತ್ತ ಗಮನಹರಿಸಲು ಸಾಧ್ಯವಾಯ್ತು ಎಂದು ಕಸ್ಟನ ಹೇಳಿದ್ರು.
ಧೋನಿ ನನ್ನೊಂದಿಗೆ ತುಂಬಾನೇ ನಿಷ್ಠೆಯೊಂದಿಗೆ ಇದ್ರು. ಕೆಲವೊಂದು ಬಾರಿ ನಾವು ಪಂದ್ಯಗಳನ್ನು ಗೆಲ್ಲುತ್ತಿರಲಿಲ್ಲ. ಕೆಲವೊಂದು ಬಾರಿ ಕಠಿಣ ಸಮಯಗಳು ಬಂದಿದ್ದವು. ನಾವು ಜೊತೆಯಾಗಿ ಕಾರ್ಯನಿರ್ವಹಿಸಿದ್ದೇವು. ಜೊತೆಯಾಗಿ ಮಾತನಾಡಿದ್ದೇವೆ. ತಂಡವನ್ನು ಯಶಸ್ಸಿನತ್ತ ಕೊಂಡೋಯ್ಯಲು ಸಾಧ್ಯವಾಯ್ತು. ಮೂರು ವರ್ಷಗಳ ಕಾಲ ನಮ್ಮ ನಡುವೆ ಬಲವಾದ ಸಂಬಂಧವಿತ್ತು ಎಂದು ನಾನು ನಂಬಿದ್ದೇನೆ ಎಂದು ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.








