ಸೂಪರ್ ಸ್ಟಾರ್ ರಜನೀಕಾಂತ್ ಗೆ ನಮ್ಮ ಭಾಷೆ ಲೆಕ್ಕಕ್ಕೆ ಇಲ್ಲ : ಮುಖ್ಯಮಂತ್ರಿ ಚಂದ್ರು

1 min read

ಸೂಪರ್ ಸ್ಟಾರ್ ರಜನೀಕಾಂತ್ ಗೆ ನಮ್ಮ ಭಾಷೆ ಲೆಕ್ಕಕ್ಕೆ ಇಲ್ಲ : ಮುಖ್ಯಮಂತ್ರಿ ಚಂದ್ರು

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಡೀ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ.. ಅದ್ರಲ್ಲೂ ಜಪಾನ್ ನಲ್ಲಿ ರಜನಿಕಾಂತ್ ರನ್ನ ಆರಾಧನ್ಯ ದೈವರಂತೆ ಪೂಜಿಸುವವರಿದ್ದಾರೆ.. ಆದ್ರೆ ರಜನೀಕಾಂತ್ ನಮ್ಮ ಬೆಂಗಳೂರಿನವರೇ .. ಇಲ್ಲೆಯೇ ಮೊದಲು ಬಸ್ ಕಂಡಕ್ಟರ್ ಆಗಿದ್ದವರು.. ಆ ನಂತರ ಅವರು ಕನ್ನಡ ಸಿನಿಮಾಗಳಲ್ಲಿ ಮಾಡಿದರೂ ಹಿಟ್ ಆಗಿದ್ದ ಮಾತ್ರ ತಮಿಳುನಾಡಿನಲ್ಲಿ.. ನಂತರ ಅಲ್ಲೇ ಉಳಿದು ಅಲ್ಲಿಯವರೇ ಆಗಿ ಹೋದರು..

ಆದ್ರೆ ಇತ್ತೀಚೆಗೆ ಕರ್ನಾಟಕ ಮಹಾರಾಷ್ಟ್ರ ನಡುವೆ ಬೆಳಗಾವಿ ಗಡಿ ವಿವಾದ ತುಸು ಜೋರಾಗಿಯೇ ಎದ್ದಿದ್ದು , ಮೆಇಎಸ್ ಪುಂಡರು ನಮ್ಮ ಕರ್ನಾಕಟ ಧ್ವಜ ಸುಟ್ಟು ಅನಾಗರಿಕರಂತೆ ವರ್ತಿಸಿದ ನಂತರ ಕನ್ನಡಿಗರು , ಕನ್ನಡ ಸಿನಿಮಾರಂಗದ ತಾರೆಯರು ಆಕ್ರೋಶಗೊಂಡಡು ಪ್ರತಿಕ್ರಿಯೆ ನೀಡ್ತಿದ್ದಾರೆ.. ಆದ್ರೆ ಕನ್ನಡದವರೇ ಆಗಿ ಬೇರೆ ಕಡೆಗೆ ಹೋಗಿ ಹಿಟ್ ಆಗಿ ಪ್ರಸ್ತುತ ಕನ್ನಡವನ್ನೇ ಮರೆತಿರುವ ಅನೇಕ ನಟನಟಿಯರಿದ್ದಾರೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ರಶ್ಮಿಕಾ ಮಂದಣ್ಣ.. ಅಂತೆಯೇ ಸುಮಾರು ಜನರಿದ್ದಾರೆ..

ಅಲ್ಲದೇ ಕೆಲ ಬಹುಭಾಷಾ ನಟರು ಈ ಬಗ್ಗೆ ಒಂದು ರಾಜ್ಯದ ವಿಚಾರವಾಗಿ ತುಟಿ ಬಿಚ್ಚದೇ ಮೌನವಾಗಿದ್ರೇನೇ ತಮಗೆ ಒಳ್ಳೆಯದು ಎಂಬಂತೆ ಇರುತ್ತಾರೆ.. ಅಂತಹವರ ವಿರುದ್ಧ ಸ್ಯಾಂಡಲ್ ವುಡ್ ನ ಹಿರಿಯ ನಟ ಮುಖ್ಯ ಮಂತ್ರಿ ಚಂದ್ರು ಆಕ್ರೋಶ ಹೊರಹಾಕಿದ್ದಾರೆ.. ಅಂತೆಯೇ ರಜಕೀಕಾಂತ್ ಅವರಿಗೆ ನಮ್ಮ ಭಾಷೆ ಲೆಕ್ಕಕ್ಕೇ ಇಲ್ಲ ಎಂದು ಹೇಳಿದ್ದಾರೆ..

ಮಾಧ್ಯಮವೊಂದರ ಜೊತೆಗೆ ಮಾತನಾಡೋವಾಗ , ಕರ್ನಾಟಕದಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ನೆಲೆ ಕಂಡುಕೊಂಡವರು ಆ ರಾಜ್ಯದ ಭಾಷೆಯ ಪರವಾಗಿಯೇ ನಿಲ್ಲುತ್ತಾರೆ.. ರರಜಜನಿಕಾಂತ್ ಅವರು ತಮಿಳುನಾಡಿನ ಜನರ ಪ್ರೀತಿ ಸಂಪಾದಿಸಿದ್ದಾರೆ.. ಆ ರಾಜ್ಯದ ಬಾಷೆಗಾಗಿ ಹೋರಾಟ ಮಾಡ್ತಾರೆ.. ಅವರಿಗೆ ನಮ್ಮ ಭಾಷೆ ಲೆಕ್ಕಕ್ಕೆ ಇಲ್ಲ ಎಂದಿದ್ದಾರೆ..

ಆದ್ರೆ ಇಲ್ಲಿಯೇ ಹುಟ್ಟಿ ಬೆಳೆದವರು ಇಲ್ಲಿನ ಜನರ , ಪ್ರೀತಿ ಸಂಪಾದಿಸಿ , ಇಲ್ಲಿಂದಲೇ ಹಣ ಗಳಿಸಿದರೂ ಇಲ್ಲಿಯೇ ಹೆಸರು ಮಾಡಿ , ಕರ್ನಾಟಕಕ್ಕೆ ಸಮಸ್ಯೆಯಾದಾಗ ಧ್ವನಿ ಎತ್ತಲೇಬೇಕು , ರಾಜ್ಯದ ಸಮಸ್ಯೆಗೆ ಆಧ್ಯತೆ ಕೊಡಬೇಕು ಎಂದಿದ್ದಾರೆ.. ಆದ್ರೆ ಅವರು ಈ ಹೇಳಿಕೆ ಮೂಲಕ ಪರೋಕ್ಷವಾಗಿ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಗಳಿಗೆ ಟಾಂಟ್ ಕೊಟ್ಟಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd