IPL 2022 | ಐದು ಬಾರಿಯ ಚಾಂಪಿಯನ್ MI ಐಪಿಎಲ್ ನಲ್ಲಿ ಕೆಟ್ಟ ದಾಖಲೆ
ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ನ ಕಳಪೆ ಪ್ರದರ್ಶನ ಮುಂದುವರೆದಿದೆ.
ಇತ್ತೀಚೆಗಷ್ಟೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಗಳಿಂದ ಸೋತ ಮುಂಬೈ ಸತತ ಆರನೇ ಸೋಲಿನಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಋತುವಿನಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಗೆಲ್ಲದ ಮುಂಬೈ ಇಂಡಿಯನ್ಸ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿಯೇ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.
2015ರ ಐಪಿಎಲ್ ಋತುವಿನಲ್ಲಿ ಸತತ ಐದು ಸೋಲುಗಳನ್ನು ದಾಖಲಿಸಿದ್ದರೂ.. ಆರನೇ ಪಂದ್ಯವನ್ನು ಗೆದ್ದು.. ನಂತರ ಮುಂಬೈ ಚಾಂಪಿಯನ್ ಆಗಿತ್ತು.
ಆದರೆ ಈ ಬಾರಿ ಅದು ಅಸಾಧ್ಯದ ಮಾತು. ಸದ್ಯದ ಪರಿಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಚೇತರಿಸಿಕೊಳ್ಳುವುದು ಕಷ್ಟ .
ಇದೇ ವೇಳೆ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ಒಂದು ಋತುವಿನಲ್ಲಿ ಸತತ ಆರು ಪಂದ್ಯಗಳಲ್ಲಿ ಸೋತ ಮೂರನೇ ತಂಡವಾಗಿದೆ.
ಇದಕ್ಕೂ ಮುನ್ನ ಡೆಲ್ಲಿ ಡೇರ್ಡೆವಿಲ್ಸ್ 2013ರಲ್ಲಿ ಮತ್ತು ಆರ್ಸಿಬಿ 2019ರಲ್ಲಿ ಸತತ ಮೊದಲ ಆರು ಪಂದ್ಯಗಳಲ್ಲಿ ಸೋತಿತ್ತು.
ಇದಲ್ಲದೆ, ಈ ತಂಡಗಳು ಆಯಾ ಋತುಗಳನ್ನು ಕೊನೆಯ ಸ್ಥಾನದೊಂದಿಗೆ ಮುಗಿಸಿದ್ದವು. ಈಗ ಮುಂಬೈ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.
ಮುಂಬೈ ತಂಡದ ಪ್ರದರ್ಶನ ನೋಡಿದರೆ ಕೊನೆಯ ಸ್ಥಾನದಲ್ಲಿ ಸೀಸನ್ ಮುಗಿಸುವ ಗುರಿ ಇದೆಯಂತೆ ಎಂದು ನೆಟ್ಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. mumbai-indians-was-3rd-team-lose-1st-six-matches-ipl-history