IPL ನಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟ ದಾಖಲೆ..!! mumbai-indians-worst-record-ipl saaksha tv
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಸತತವಾಗಿ ಸೋತ ಮೊದಲ ತಂಡ ಎಂಬ ಬೇಡದಿರುವ ದಾಖಲೆಯನ್ನ ಮುಂಬೈ ನಿರ್ಮಿಸಿದೆ.
15ನೇ ಆವೃತ್ತಿಯಲ್ಲಿ, ಮಾರ್ಚ್ 27 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿದ ರೋಹಿತ್ ಸೇನೆಯು 4 ವಿಕೆಟ್‌ಗಳಿಂದ ಸೋತಿತು.

ಆ ನಂತರ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್.. ಇತ್ತೀಚೆಗೆ CSK ವಿರುದ್ಧ ಸೋತಿದೆ.
ಈ ಮೂಲಕ ಮುಂಬೈ ಕ್ಯಾಶ್ ರಿಚ್ ಲೀಗ್‌ನಲ್ಲಿ ಆರಂಭಿಕ ಏಳು ಪಂದ್ಯಗಳಲ್ಲಿ ಸೋತ ಮೊದಲ ತಂಡವಾಗಿದೆ.
ಹಿಂದಿನ 2013 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್. 2019ರ ಋತುವಿನ ಮೊದಲ ಆರು ಪಂದ್ಯಗಳಲ್ಲಿ ಆರ್ ಸಿಬಿ ಸೋಲು ಕಂಡಿತ್ತು.