ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಮೈದಾನಕ್ಕೆ ಇಳಿಯುವ ಮುನ್ನ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ. ಕೊರೊನಾ ವೈರಸ್ ಬಳಿಕ ಕ್ರಿಕೆಟ್ ಕ್ರೀಡೆ ಮತ್ತೆ ಶುರುವಾಗುವ ಮುನ್ನ ರೋಹಿತ್ ತಮ್ಮನ್ನು ತಾವು ಫಿಟ್ ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ನ್ಯೂಜಿಲೆಂಡ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದ ರೋಹಿತ್ ತವರಿಗೆ ಮರಳಿದ್ದರು. ಸದ್ಯ ರೋಹಿತ್ ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಮುಂಬೈಕರ್ ರೋಹಿತ್ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಸರಣಿ ಕೊರೊನಾ ವೈರಸ್ ನಿಂದಾಗಿ ರದ್ದಾಗಿತ್ತು. “ಲಾಕ್ ಡಾನ್ ಗೂ ಮುನ್ನ ನಾನು ಫಿಟ್ ಆಗಿದ್ದೆ ಆದರೆ, ಅವಕಾಶ ಲಭಿಸಲಿಲ್ಲ. ಗೃಹ ಬಂಧನದಲ್ಲಿ ದೈಹಿಕ್ ಕ್ಷಮತೆಗೆ ಒತ್ತು ನೀಡಿರುವೆ” ಎಂದು ಟೀಮ್ ಇಂಡಿಯಾದ ಸೀಮಿತ ಓವರ್ ಗಳ ತಂಡದ ಉಪನಾಯಕ ರೋಹಿತ್ ತಿಳಿಸಿದ್ದಾರೆ. “ಎಲ್ಲವೂ ಸಹಜ ಸ್ಥಿತಿಗೆ ಬಂದ ಮೇಲೆ, ಮೊದಲು ಎನ್ ಸಿ ಎನಲ್ಲಿ ದೈಹಿಕ ಪರೀಕ್ಷೆ ನೀಡುವೆ. ಇದರಲ್ಲಿ ಪಾಸ ಆದರೆ ಮುಂದಿನ ದಾರಿ ಸುಗಮ” ಎಂದಿದ್ದಾರೆ.








