ಚಿಕ್ಕಬಳ್ಳಾಪುರ : ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಯುವತಿಯನ್ನು ತಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆ ಮಾಡಿದ ನಂತರ ತಂದೆಯೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ದೇವನಹಳ್ಳಿ (Devanahalli) ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ಯುವತಿ ಕವನ (20) ಕೊಲೆಯಾದ ಯುವತಿ. ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ತಂದೆ.
ಮಗಳ ಪ್ರೀತಿಯ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ತಂದೆ, ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು (Vishwanathapura Police) ಭೇಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಮಂಜುನಾಥ್ ಕಿರಿಯ ಮಗಳು ಪ್ರೀತಿಸಿ ಬೇರೊಬ್ಬ ಯುವಕನೊಂದಿಗೆ ಪರಾರಿಯಾಗಿದ್ದಳು. ಹೀಗಾಗಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನ ಪ್ರೀತಿ ಮಾಡ್ತಿದ್ದೀಯಾ? ಊರಲ್ಲಿ ಹೇಗೆ ಗೌರವದಿಂದ ಬದುಕಬೇಕು ಎಂದು ಮಗಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದ.