ಬೆಂಗಳೂರು: ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಕುಟುಂಬ ಸರಳತೆಯಿಂದಾಗಿ ಆಗಾಗ ಜನ ಮನ್ನಣೆಗೆ ಪಾತ್ರರಾಗುತ್ತಿದ್ದರು. ಸದ್ಯ ಮತ್ತೆ ಅಂತಹ ಜ್ವಲಂತ ಉದಾಹರಣೆಯೊಂದು ಸಿಕ್ಕಿದ್ದು, ಸರಳ ಬಟ್ಟೆ ತೊಟ್ಟು ಅವರ ಕುಟುಂಬ ಸಾಮಾನ್ಯರಂತೆ ರಸ್ತೆಯಲ್ಲಿ ಓಡಾಡಿ ಪುಸ್ತಕ ಖರೀದಿಸಿದೆ.
ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಅವರು ತವರಿಗೆ ಬಂದಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಕೂಡಾ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಮಕ್ಕಳು ಹಾಗೂ ನಾರಾಯಣಮೂರ್ತಿ, ಸುಧಾಮೂರ್ತಿ ಅವರು ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆಯಲ್ಲಿ ಜನ ಸಾಮಾನ್ಯರಂತೆ ಓಡಾಡಿದ್ದಾರೆ. ಅಲ್ಲದೇ, ರಸ್ತೆಯಲ್ಲಿ ಪುಸ್ತಕಗಳನ್ನು ಹುಡುಕಾಡಿ ಖರೀದಿಸಿದ್ದಾರೆ.ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
UK PM Rishi Sunak’s wife and kids spotted at Raghavendra Mutt in Bengaluru, accompanied by Infosys Founder Narayanamurthy. Their simplicity shines through, with no security in sight. pic.twitter.com/WxIAvHh40w
— M.R. Guru Prasad (@GuruPra18160849) February 26, 2024
ಇತ್ತೀಚೆಗಷ್ಟೇ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಗಿತ್ತು. ಈ ಸಮಾರಂಭಕ್ಕೆ ಅಕ್ಷತಾ ಮೂರ್ತಿ ಹಾಗೂ ಅವರ ಮಕ್ಕಳು ಬಂದಿದ್ದರು. ಈ ಸಂದರ್ಭದಲ್ಲಿನ ವಿಡಿಯೋ ಇದಾಗಿರಬಹುದು ಎನ್ನಲಾಗುತ್ತಿದೆ. ಇಡೀ ಕುಟುಂಬ ಸರಳ ಉಡುಗೆಯಲ್ಲಿ ಬಂದಿತ್ತು. ಸಾಮಾನ್ಯರಂತೆ ಪುಸ್ತಕಗಳನ್ನು ಹುಡುಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಎಂ.ಆರ್.ಗುರುಪ್ರಸಾದ್ ಎಂಬುವವರು ಹಂಚಿಕೊಂಡಿದ್ದಾರೆ. ಸದ್ಯ ಇದು ವೈರಲ್ ಆಗುತ್ತಿದ್ದು, ಜನರು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.