ಮ್ಯಾನ್ಮಾರ್ : ಮಿಲಿಟರಿ ವಾಹನಗಳ ತಿರುಗಾಟ, ಇಂಟರ್ ನೆಟ್ ಸ್ಥಗಿತ , ಉದ್ವಿಗ್ನ ಪರಿಸ್ಥಿತಿ ..!

1 min read

ಮ್ಯಾನ್ಮಾರ್ : ಮಿಲಿಟರಿ ವಾಹನಗಳ ತಿರುಗಾಟ, ಇಂಟರ್ ನೆಟ್ ಸ್ಥಗಿತ , ಉದ್ವಿಗ್ನ ಪರಿಸ್ಥಿತಿ ..!

ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಸೇನಾ ಸರ್ಕಾರ ಅಧಿಪತ್ಯ ಸಾಧಿಸಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇಂಟರ್ ನೆಟ್ ಸ್ಥಗಿತದ ಜೊತೆಗೆ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಹಲವು ನಗರಗಳಲ್ಲಿ ಭಾನುವಾರ ತಡರಾತ್ರಿ ಶಸ್ತ್ರಶಜ್ಜಿತ ವಾಹನಗಳು ಗಸ್ತು ತಿರುಗಾಟ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮ್ಯಾನ್ಮಾರ್ ಸೇನಾ ಆಡಳಿತ ಭಾನುವಾರದಂದು ಯಾಂಗೊನ್ ಸೇರಿದಂತೆ ಹಲವು ನಗರಗಳಲ್ಲಿ ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಟರಿ ವಾಹನಗಳ ಚಲನೆಗಳ ಬಗ್ಗೆ ವಿಡಿಯೊಗಳು ಹೊರಬಂದಿದ್ದವು. ಸಾರಿಗೆ ಹಾಗೂ ಸಂವಹನ ಸಚಿವಾಲಯದ ಆದೇಶದಂತೆ ಮೊಬೈಲ್ ಫೋನ್ ಬಳಕೆದಾರರಿಗೆ ಸೋಮವಾರ ಇಂಟರ್ನೆಟ್ ಸೇವೆ ಕಡಿತಗೊಳಿಸಲಾಗುವುದು ಎಂಬ ಮಾಹಿತಿಯು ಸೋರಿಕೆಯಾಗಿತ್ತು. ಪ್ರಸ್ತುತ ಇಂಟರ್ನೆಟ್ ಸೇವೆ ಕಡಿತಗೊಳಿಸಲಾಗಿದೆ ಎಂದು ರಾಷ್ಟ್ರಿಯ ಸುದ್ದಿವಾಹಿನಿಯು ವರದಿ ಮಾಡಿದೆ.

MADE IN INDIA – ಗೂಗಲ್ ಮ್ಯಾಪ್ ಗೆ ಟಕ್ಕರ್ ನೀಡಲಿದೆ ಭಾರತ ‘ಭುವನ್’ ಆಪ್.!

ಮಿಲಿಟರಿ ಚಲನೆ ಹಾಗೂ ಇಂಟರ್ನೆಟ್ ಕಡಿತದ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ನಲ್ಲಿರುವ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ ರವಾನಿಸಿದೆ. ನಾಗರಿಕ ಅಸಹಕಾರ ಚಳುವಳಿ ಮತ್ತು ಪ್ರತಿಭಟನೆಗಳು ಮ್ಯಾನ್ಮಾರ್ ಜನರು ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ. ಮ್ಯಾನ್ಮಾರ್ ನಲ್ಲಿ ಸೇನಾ ದಂಗೆಯನ್ನು ವಿರೋಧಿಸಿ ದೇಶದಾದ್ಯಂತ ಅಪಾರ ಸಂಖ್ಯೆಯ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd