Mysore | ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಬಡಿದಾಟ
ಮೈಸೂರು : ಹೋಟೆಲ್ ನಲ್ಲಿ ಎರಡು ಗುಂಪುಗಳು ಬಡಿದಾಡಿಕೊಂಡಿರುವ ಘಟನೆ ಮೈಸೂರಿನ ಜಗನ್ಮೋಹನ ಅರಮನೆ ಸಮೀಪ ನ್ಯೂ ಹೋಟೆಲ್ ನಲ್ಲಿ ನಡೆದಿದೆ.
ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪುಂಡರು ಹೋಟೆಲ್ ಮಾಲೀಕ ರಸ್ಮಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ಗ್ರಾಹಕರೊಬ್ಬರು ಬಿಲ್ ಕೊಡುವಾಗ ಪುಂಡನೊಬ್ಬ ಜೇಬಿಗೆ ಕೈ ಹಾಕಿದ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಘಟನೆ ಕುರಿತು ಮಾಲೀಕ ರಸ್ಮಲ್ ರಿಂದ ದೇವರಾಜ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣಾ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.