ಮಡಿಕೇರಿ: ಮತ್ತಿಗೋಡಿನ ಅಭಿಮನ್ಯು ನೇತೃತ್ವದ ಕೊಡಗು ಜಿಲ್ಲೆಯ ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಾಗಿವೆ.
ಮೈಸೂರು ದಸರಾದ ಜಂಬೂ ಸವಾರಿಗೆ ತಾಲೀಮು ನಡೆಸಿರುವ ಗಜಪಡೆಗಳು ಸೋಮವಾರದ ವಿಜಯದಶಮಿಯ ಚಿನ್ನದ ಅಂಬಾರಿ ಹೊತ್ತು ಸಾಗಲು ಸಜ್ಜಾಗಿವೆ.
ಇದೇ ಮೊದಲ ಬಾರಿಗೆ ಅಭಿಮನ್ಯು ನೈತೃತ್ವದ ತಂಡ ಕೋವಿಡ್‍ನಿಂದ ಸೀಮಿತಗೊಂಡಿರುವ ಜಂಬೂ ಸವಾರಿಯ ತಾಲೀಮನ್ನು ಆರಮನೆ ಆವರಣದ ಪಥದಲ್ಲಿ ಮುಗಿಸಿದ್ದು ಅಭಿಮನ್ಯು ತಂಡದ ಬಗ್ಗೆ ಅಧಿಕಾರಿಗಳು, ವೈದ್ಯರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈಗಾಗಲೇ ಅಭಿಮನ್ಯುವಿನ ಮಾವುತ ವಸಂತ ಸಹ ಎಲ್ಲಾ ರೀತಿಯ ತರಬೇತಿ ನೀಡಿದ್ದು, ಆತನ ನಿರ್ದೇಶನದಂತೆ ಜಂಬೂ ಸವಾರಿ ನಡೆಯಲಿದೆ. ಮರದ ಅಂಬಾರಿ ಹೊರಿಸಿ, ಗಣ್ಯರ ಬಳಿ ತೆರಳಿ ದೇವಿಗೆ ಪುಷ್ಪ ನಮನ ಮಾಡುವುದು, ಸಂಪೂರ್ಣ ತಂಡವನ್ನು ನಿಯಂತ್ರಿಸುವ ಕೆಲಸದ ಬಗ್ಗೆ ತಾಲೀಮು ನಡೆಸಿದ್ದು ವಿಜಯ ದಶಮಿಯಂದು ಚಿನ್ನದ ಅಂಬಾರಿಯೊಂದಿಗೆ ಇದೇ ಪದ್ದತಿ ನಡೆಯಲಿದೆ.
ಪ್ರತಿವರ್ಷ ಮೈಸೂರು ದಸರಾದ ಸಂಭ್ರಮ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಸೇರುತ್ತಾರೆ. ಮೈಸೂರು ಅರಮನೆಯಿಂದ ಆರಂಭವಾಗುವ ಜಂಬೂ ಸವಾರಿ, ನಗರದ ಕೆಲ ರಸ್ತೆಗಳ ಮೂಲಕ ಸಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಚಿನ್ನದ ಅಂಬಾರಿಯಲ್ಲಿ ಆಸೀನಳಾಗುವ ನಾಡದೇವತೆ ಚಾಮುಂಡಿಯನ್ನು ಹೊತ್ತ ಗಜಪಡೆಯನ್ನು ಗಾಂಭೀರ್ಯವನ್ನು ನೋಡುವುದೇ ಸಂಭ್ರಮ.
ಕೊಡಗಿಗೆ ಹುಲಿ ಸಂಖ್ಯೆ ಹೆಚ್ಚಳವೇ ಮುಳುವಾಯಿತೇ..?
ಆದರೆ, ಈ ಬಾರಿ ಹೆಮ್ಮಾರಿ ಕೊರೊನಾ ವಕ್ಕರಿಸಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾದ ಜಂಬೂ ಸವಾರಿಯನ್ನು ಸರಳವಾಗಿ ಹಾಗೂ ಅರಮನೆ ಆವರಣದಲ್ಲೇ ಮುಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸೀಮಿತ ಹಾಗೂ ಕೆಲವೇ ಕೆಲವು ಆಹ್ವಾನಿತರಿಗೆ ಮಾತ್ರ ಜಂಬೂಸವಾರಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಸಾಮಾನ್ಯ ಜನರು ದಸರಾ ಜಂಬೂ ಸವಾರಿಯನ್ನು ಈ ವರ್ಷ ಮಿಸ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೂ ಜಂಬೂ ಸವಾರಿಯ ಸಂಭ್ರಮಕ್ಕೆ ಕೊರತೆ ಇಲ್ಲ. ಮನೆಯಲ್ಲೇ ಕುಳಿತು ದಸರಾ ಜಂಬೂ ಸವಾರಿಯ ಸಡಗರವನ್ನು ಕಣ್ತುಂಬಿಕೊಳ್ಳಬಹುದು.
ಚಿತ್ರ:ನಾಗೇಶ್ ಪಾಣ್ತಲೆ, ಅಂತರಾಷ್ಟ್ರೀಯ ಮಾನ್ಯತೆ ಪಡೆದ ಛಾಯಾಗ್ರಾಹಕ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel