ಮೈಸೂರು : ಕೊರೊನಾ ಹಿನ್ನೆಲೆ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರನೆ ಮಾಡಲಾಗುತ್ತಿದೆ. ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ 300 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕಲಾ ತಂಡಗಳು ಮತ್ತು ಸ್ತಬ್ದಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿದ್ದವು.
ಕೇವಲ 500 ಮೀಟರ್ ಮೆರವಣಿಗೆ
ಕೊರೊನಾ ಹಿನ್ನೆಲೆ ಸರಳ ದಸರಾ ಆಚರಣೆ ಮಾಡಲಾಗುತ್ತಿರುವ ಕಾರಣ ಈ ಬಾರಿ ಅರಮನೆ ಒಳಗೆ ಕೇವಲ 500 ಮೀಟರ್ ಮೆರವಣಿಗೆ ನಡೆಯಲಿದೆ. ಅದರಲ್ಲಿ ಭಾಗವಹಿಸುವ ಕಲಾ ತಂಡಗಳ ಮತ್ತು ಸ್ತಬ್ಧಚಿತ್ರಗಳ ವಿವರ ಇಲ್ಲಿದೆ.
ಇದನ್ನೂ ಓದಿ : ಮಹಾಮಳೆಗೆ ಕೊಚ್ಚಿಹೋಯ್ತು ಬೆಂಗಳೂರು: ಒಂದೇ ದಿನ ದಾಖಲೆ ಮಳೆ..!
ಈ ಬಾರಿ ಮೆರವಣಿಗೆಯಲ್ಲಿ ಕೃಷ್ಣಮೂರ್ತಿಯ ತಂಡ ಹಾಗೂ ಪುಟ್ಟಸ್ವಾಮಿಯ ತಂಡ ನಾದಸ್ವರ. ಮರದ ಕಾಲುವೇಷ ಸಿದ್ದರಾಜು ಮತ್ತು ತಂಡ.
ಚಂಡೆ ಮೇಳ ಶ್ರೀನಿವಾಸ್ ರಾವ್ ರ ತಂಡ. ವೀರಗಾಸೆ ರಾಜಪ್ಪರ ತಂಡ. ಚಿಲಿಪಿಲಿ ಗೊಂಬೆ ಟಿ.ಕೆ.ರಾಜಶೇಖರ ತಂಡ ಭಾಗವಹಿಸಲಿವೆ.
ಇನ್ನು ಸ್ತಬ್ದಚಿತ್ರ ವಿಚಾರಕ್ಕೆ ಬಂದ್ರೆ ಆರೋಗ್ಯ ಇಲಾಖೆ ಸ್ತಬ್ಧಚಿತ್ರ, ಆನೆ ಬಂಡಿಯಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್, ಪೊಲೀಸ್ ಅಶ್ವದಳ ಪ್ರಧಾನ ದಳಪತಿ, ಕೆ.ಎ.ಆರ್.ಪಿ. ಮೌಂಟೇನ್ ಕಂಪನಿ ಮೈಸೂರು,
ಪಟ್ಟದ ನಾದಸ್ವರ ಪೊಲೀಸ್ ಅಶ್ವದಳ – ಕೆ.ಎ.ಆರ್.ಪಿ. ಮೌಟೆಂನ್ ಕಂಪನಿ ಮೈಸೂರು, ಫಿರಂಗಿ ಗಾಡಿ ಅರಣ್ಯ ಇಲಾಖೆಯ ವೈದ್ಯರ ತಂಡ, ಅಗ್ನಿಶಾಮಕ ತಂಡ ತುರ್ತು ಚಿಕಿತ್ಸಾ ವಾಹನ ಈ ಬಾರಿಯ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಇದನ್ನೂ ಓದಿ : ರಾಜಧಾನಿ ಬೆಂಗಳೂರಿಗೆ ಜಲದಿಗ್ಬಂಧನ: ಮುಳುಗಿದ ಮನೆಯಲ್ಲಿ ಎರಡು ಹಸುಗೂಸು ರಕ್ಷಣೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel