ರಾಜಪಥದಲ್ಲಿ ಎನ್ ಸಿ ಸಿ ಕೆಡೆಟ್ ಮುನ್ನಡೆಸಿದ ಮೈಸೂರಿನ ವಿದ್ಯಾರ್ಥಿನಿ….
ಇಂದು ದಹಲಿಯಲ್ಲಿ ನಡೆದ ಗಣರಾಜ್ಯೊತ್ಸವದ ಸಂಭ್ರಮದಲ್ಲಿ ರಾಜಪಥದ ಪರೆಡ್ ನಲ್ಲಿ ಮೈಸೂರಿನ ಪ್ರಮೀಳಾ ಕುನ್ವರ್ ಎನ್ ಸಿ ಸಿ ತಂಡದ ನೇತೃತ್ವ ವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Mysore student who led NCC cadet at Rajpath….
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ ಎಸ್ ಸಿ ವ್ಯಾಸಾಂಗ ಮಾಡುತ್ತಿರುವ ಪ್ರಮೀಳಾ ಕುನ್ವರ್ ಎನ್ ಸಿ ಸಿ ಕೆಡಟರ್ ಗಳ ಮುಂದಾಳತ್ವವನ್ನ ವಹಿಸಿ ದೇಶದ ಗಮನ ಸೆಳೆದಿದ್ದಾರೆ. ಇವರ ತಂದೆ ಮೈಸೂರು ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಾರೆ.
ಪೆರಡ್ ಗೆ ಆಯ್ಕೆಯಾಗಿದ್ದ ದೇಶದ ಎಲ್ಲಾ 17 ಎನ್ ಸಿ ಸಿ ಘಟಕಗಳ ಸೀನಿಯರ್ ವಿಂಗ್ ಕೆಡೆಟರ್ ಆಗಿ ಕಮಾಂಡಿಂಗ್ ಲೀಡರ್ ಪ್ರಮೀಳಾ ಕುನ್ವರ್ ಕಾರ್ಯ ನಿರ್ವಹಿಸಿದ್ದಾರೆ.