Mysuru Dasara 2022 | ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ
ಮೈಸೂರು : ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ.
ಅಂಬಾರಿಯನ್ನು ಹೊತ್ತು ರಾಜಮಾರ್ಗದಲ್ಲಿ ಸಾಗಲು ಗಜಪಡೆ ಸಿದ್ಧವಾಗಿದೆ.
ಈ ಬಾರಿ ಜಾನಪದ ತಂಡ, ಸ್ತಬ್ದ ಚಿತ್ರಗಳು ಹೆಚ್ಚು ಇರಲಿವೆ. ಹೀಗಾಗಿ ಜಂಬೂ ಸವಾರಿಯಲ್ಲಿ 9 ಆನೆಗಳು ಮಾತ್ರ ಭಾಗಿಯಾಗಲಿವೆ.

ಜಂಬೂ ಸವಾರಿ ಆನೆಗಳು:
* ಕ್ಯಾಪ್ಟನ್ – ಅಭಿಮನ್ಯು
* ನಿಶಾನೆ ಆನೆ – ಅರ್ಜುನ
* ನೌಫತ್ ಆನೆ- ಗೋಪಿ
* ಕುಮ್ಕಿ ಆನೆಗಳು – ಕಾವೇರಿ ಮತ್ತು ಚೈತ್ರ
* ಧನಂಜಯ, ಮಹೇಂದ್ರ
* ಭೀಮ, ಗೋಪಾಲಸ್ವಾಮಿ ಆನೆಗಳು ಭಾಗಿ ಆಗಲಿವೆ.
ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸುವ ಬಗ್ಗೆ ಡಿಸಿಎಫ್ ಕರಿಕಾಳನ್ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಂಬೂ ಸವಾರಿ ಪ್ರಮುಖ ಆಕರ್ಷಣೆ ಕ್ಯಾಪ್ಟನ್ ಕೂಲ್ ಅಭಿಮನ್ಯು ಮೂರನೇ ಬಾರಿಗೆ ಅಂಬಾರಿ ಹೊರಲಿದ್ದಾನೆ.