ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಮಸ್ತೆ ಹೇಳಿದ್ದಾರೆ. ಇಂದು ಅಹಮದಾಬಾದ್ ನ ಮೊಟೇರಾ ಮೈದಾನದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಟ್ರಂಪ್ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ್ರು, ಈ ವೇಳೆ ಮೆಲಾನಿಯ ಟ್ರಂಪ್ ಹಾಗೂ ಪುತ್ರಿ ಇವಾಂಕಾ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಲಕ್ಷಾಂತರ ಜನರು ಟ್ರಂಪ್ ಗೆ ನಮಸ್ತೆ ಹೇಳಿದ್ರು.
ಇನ್ನು ಕಾರ್ಯಕ್ರಮದಲ್ಲಿ ಭಾರತೀಯ ಉದ್ಯಮಿ ಮತ್ತು ಕ್ರಿಕೆಟ್ ಆಡಳಿತಾಧಿಕಾರಿ ಜಯ್ ಶಾ ಹಾಗೂ ಬಿಸಿಸಿಐ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪಾಲ್ಗೊಂಡಿದ್ದರು. ಇಂದು ಮತ್ತು ನಾಳೆ ಭಾರತದಲ್ಲಿ ಟ್ರಂಪ್ ಪ್ರವಾಸ ಮುಂದುವರೆಯಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಟ್ರಂಪ್ ಕುಟುಂಬ ಭಾಗಿಯಾಗಲಿದೆ.
Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!
ವಾಸ್ತು ಶಾಸ್ತ್ರ – ದಿಕ್ಕು ನಿರ್ದೇಶನಗಳು, ಬ್ರಹ್ಮಸ್ಥಾನ (ಮಧ್ಯಭಾಗ) ತಟಸ್ಥ ಶಕ್ತಿಯ ಕೇಂದ್ರ (Neutral Energy Zone) ಮನೆಯ ಮಧ್ಯಭಾಗವನ್ನು ತೆರವು ಮತ್ತು ಸ್ವಚ್ಛವಾಗಿಡುವುದು ಉತ್ತಮ. ಶ್ರೀ ಕ್ಷೇತ್ರ...








