Namma Metro Pillar Collapse : ತಾಯಿ ಮಗು ಸಾವು ಪ್ರಕರಣಕ್ಕೆ ಇಂಜಿನಿಯರ್ , ಕಂಟ್ರಾಕ್ಟರ್ ಗಳೇ ನೇರ ಹೊಣೆ – IISC ವರದಿ
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಫಿಲ್ಲರ್ ಬಿದ್ದು ತಾಯಿ ಮಗು ಸಾವನಪ್ಪಿದ್ದ ಪ್ರಕರಣದಲ್ಲಿ ತಾಯಿ ಮಗು ಸಾವಿಗೆ ಬಿಎಂಆರ್ಸಿಎಲ್ ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ಗಳೇ ನೇರ ಹೊಣೆ ಎಂದು IISC , BMRCL ಗೆ ಇಂದು ವರದಿ ಸಲ್ಲಿಸಲಿದೆ..
ಈಗಾಗಲೇ IISC ತಾಂತ್ರಿಕ ತನಿಖೆ ನಡೆಸಿ ವರದಿ ಸಿದ್ದಪಡಿಸಿದೆ.. ತನಿಖೆಯನ್ನ ಪ್ರಾರಂಭಿಸುವಾಗ ತನಿಖೆಗೆ ಬಳಸಿದ್ದ ಕಂಬಿ, ಮರಳು, ಸಿಮೆಂಟ್ ಗಳ ಕ್ವಾಲಿಟಿ ರಿಪೋರ್ಟ್ ಪಡೆದಿದ್ದ IISC ಆದ್ರ ಜೊತೆಗೆ ಜಲ್ಲಿ , ಮಣ್ಣು ,ಸಿಮೆಂಟ್ ಗಳ ಟೆಸ್ಟಿಂಗ್ ರಿಪೋರ್ಟ್ ಪಡೆದಿದೆ..
ಈ ಫಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿಯನ್ನ ಬಿಎಂಆರ್ಸಿಎಲ್ ಕಟ್ಟಿದ್ದು , ಈ ಎತ್ತರದಲ್ಲಿ 6 ಪ್ಲೋರ್ ಮನೆ ಕಟ್ಟಬಹುದು, ಅಷ್ಟು ಉದ್ದದ ಕಂಬಿ ಫಿಲ್ಲರ್ ಯಾಕೆ ಕಟ್ಟಿದ್ರು ಎಂಬ ಪ್ರಶ್ನೆ ಮಾಡಲಾಗಿದೆ..
ಇಷ್ಟು ಎತ್ತರದ ಫಿಲ್ಲಗೆ ಕಂಬಿ ಕಟ್ಟಿದಾಗ ಮುಂಜಾಗ್ರತಾ ಕ್ರಮವಾಗಿ ಕಂಬಿಯ ಫಿಲ್ಲರ್ ಗೆ ಸರಿಯಾದ ಸಪೋರ್ಟ್ ನೀಡಬೇಕಿತ್ತು.. ಸಪೋರ್ಟ್ ನೀಡದಿದ್ದದ್ದೇ ಈ ಅನಾಹುತಕ್ಕೆ ಕಾರಣವಾಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ..
ಕೆಲಸಗಾಗರು ಕಂಬಿಯ ಫಿಲ್ಲರ್ ನ್ನ ನೇರವಾಗಿ ನಿಲ್ಲಿಸಲು ಸುತ್ತಲು ಸಪೋರ್ಟ್ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ ಗಳೆ ಅದನ್ನ ನೋಡಿಕೊಳ್ಳಬೇಕು. ಸದ್ಯಕ್ಕೆ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ ಗಳೇ ನೇರ ಹೊಣೆ ಎಂದು IISC ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ ಗಳನ್ನೆ ತಪ್ಪಿತಸ್ಥರೆಂದು ವರದಿ ಸಿದ್ಧಪಡಿಸಿದೆ..
Namma Metro Pillar Collapse , IISC reports says Engineers and contracters are responsible for mother and child death








