Namma Metro : ಮೆಟ್ರೋ ಪಿಲ್ಲರ್ ಕುಸಿತ : ಗೃಹಿಣಿ , ಮಗು ಸಾವು
ಮೆಟ್ರೋ ಪಿಲ್ಲರ್ ಕುಸಿತ : ಗೃಹಿಣಿ , ಮಗು ಸಾವು
ದ್ವಿಚಕ್ರದಲ್ಲಿ ಹೋಗುವಾಗ ಮೆಟ್ರೋ ಪಿಲ್ಲರ್ ಕುಸಿತ
ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್
ತಂದೆ , ಮತ್ತೊಬ್ಬ ಮಗು ಪ್ರಾಣಾಪಾಯದಿಂದ ಪಾರು
ಅವೈಜ್ಞಾನಿಕವಾಗಿ ಮೆಟ್ರೋ ಪಿಲ್ಲರ್ ನಿರ್ಮಾಣ ಆರೋಪ
ಬೆಂಗಳೂರು : ಮತ್ತೊಮ್ಮೆ ನಮ್ಮ ಮೆಟ್ರೋ ಕಾಮಗಾರಿಯ ಬಗ್ಗೆ ಪ್ರಶ್ನೆಗಳು ಉದ್ಭವಾಗಿದೆ.. ಕಳಪೆ ಕಾಮಗಾರಿ ಬಗ್ಗೆ ಚರ್ಚೆಗಳಾರಂಭವಾಗಿದೆ..
ನಾಗಾವಾರದ ಬಳಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಹಾಗೂ ಮಗು ಸಾವನಪ್ಪಿರುವ ಘಟನೆ ನಡೆದಿದೆ..
ಮೆಟ್ರೋ ಪಿಲ್ಲರ್ ಕುಸಿದು 35 ವರ್ಷದ ತೇಜಸ್ವಿನಿ ಎಂಬುವರು ಸಾವನಪ್ಪಿದ್ದಾರೆ..
ದ್ವಿಚಕ್ರದಲ್ಲಿ ಹೋಗುವಾಗ ಮೆಟ್ರೋ ಪಿಲ್ಲರ್ ಇದ್ದಕ್ಕಿದ್ದ ಹಾಗೆ ಕುಸಿದಿದೆ..
ತಾಯಿ ಹಾಗೂ ಮಗು ಮೃತಪಟ್ಟಿದ್ದು , ಪತಿ ಹಾಗೂ ಮತ್ತೋರ್ವ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಪತಿ ಲೋಹಿತ್ ಕುಮಾರ್ ಸಿವಿಲ್ ಎಂಜಿನಿಯರ್.. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ..
ದಂಪತಿಗಳು ನಾಗವಾರ ನಿವಾಸಿಯಾಗಿದ್ದರು..
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಮೆಟ್ರೋ ಪಿಲ್ಲರ್ ಬಿದ್ದಿದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.. ಘಟನೆಯಲ್ಲಿ 2 ವರೆ ವರ್ಷದ ಮಗು ವಿಹಾನ್ ಕೂಡ ಮೃತಪಟ್ಟಿದ್ದಾನೆ..