‘ಪೊಗರಿ’ನಿಂದ ಅಬ್ಬರಿಸಿ ‘ದುಬಾರಿ’ಯಾಗಿರುವ ನಂದ ಕಿಶೋರ್ ‘ಭಜರಂಗಿ’ ಜೊತೆ ಹೊಸ ಸಿನಿಮಾ..!
ಪೊಗರು ರಿಲೀಸ್ ಆದ ಸಂತಸದಲ್ಲಿರುವ ನಂದ ಕಿಶೋರ್ ಮತ್ತೆ ಧ್ರುವ ಜೊತೆ ‘ದುಬಾರಿ’ಯಾಗಿ ಎಂಟ್ರಿಯಾಗೋದಕ್ಕೆ ತಯಾರಿ ನಡೆಸುತ್ತಿದ್ಧಾರೆ. ಈ ನಡುವೆ ಮತ್ತೊಂದು ಸಿನಿಮಾ ಮೂಲಕ ಮಿಂಚು ಹರಿಸಲು ತಯಾರಾಗ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ ನಂದಕಿಶೋರ್. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾಗೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೇ ಮೊದಲ ಬಾರಿಗೆ ನಂದ ಕಿಶೋರ್ – ಶಿವಣ್ಣ ಕಾಂಬಿನೇಷನ್ ಒಂದಾಗಲಿದ್ದಾರೆ. ಈ ಜೋಡಿಯ ಕಾಂಬೋ ಹೇಗೆ ಮೋಡಿ ಮಾಡುತ್ತೆ ಅನ್ನೋದನ್ನ ಫ್ಯಾನ್ಸ್ ಎದುರುನೋಡಲಿದ್ದಾರೆ.
ಮೂಲಗಳ ಪ್ರಕಾರ ಈ ಸಿನಿಮಾ 2 ಭಾಷೆಯಲ್ಲಿ ಬರಲಿದೆ ಎನ್ನಲಾಗಿದೆ. ಸಿನಿಮಾ ಶಿವಣ್ಣ ಹೊಸ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆಯಂತೆ.
ಅಂದ್ಹಾಗೆ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿದೆ. ಮತ್ತೊಂದೆಡೆ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನ 4ನೇ ಸಿನಿಮಾವೂ ಇತ್ತಿಚೆಗಷ್ಟೇ ಅನೌನ್ಸ್ ಆಗಿದೆ. ವೇದ ಸಿನಿಮಾದಲ್ಲಿ ಶಿವಣ್ಣ ಬ್ಯುಸಿಯಾಗಲಿದ್ದಾರೆ.
ಇತ್ತ ನಂದಕಿಶೋರ್ ಕೂಡ ಮತ್ತೊಮ್ಮೆ ಧ್ರುವಗೆ ಆಕ್ಷನ್ ಕಟ್ ಹೇಳ್ತಿದ್ದು, ದುಬಾರಿ ಸಿನಿಮಾ ಮೂಲಕ ಮತ್ತೆ ಮಾಸ್ ಆಗಿ ಎಂಟ್ರಿಯಾಗೋಕೆ ಸಜ್ಜಾಗಿದ್ದಾರೆ. ಇದಾದ ಬಳಿಕ ಶಿವಣ್ಣ ಮತ್ತೆ ನಂದಕೀಶೋರ್ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆಕ್ಷನ್ ಪ್ರಿನ್ಸ್ ಗಾಗಿ ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಪುರಿ ಜಗನ್ನಾಥ್..!
ಚುನಾವಣೆಗೆ ಕೊರೊನಾ ಹೆದರಿಕೊಂಡು ಓಡಿ ಹೋಗುತ್ತಾ : ಹೆಚ್ ಡಿಕೆ ಪ್ರಶ್ನೆ








