ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗ ನಂದಿ ಬೆಟ್ಟ..!
ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗವೆಂದೇ ಪ್ರಸಿದ್ಧಿ ಪಡೆದಿರುವ ನಂದಿ ಬೆಟ್ಟದ ರಮಣೀಯ ನೋಟಕ್ಕೆ ಎಂಥವರೇ ಆದರೂ ಮಾರಿಹೋಗ್ತಾರೆ.
ಅದ್ರಲ್ಲೂ ಬೆಳ್ಳಂ ಬೆಳಿಗ್ಗೆ ನಂದಿಗೆ ಭೇಟಿ ಮಾಡುದ್ರೆ ಮಂಜಿನ ಸುತ್ತಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನ ಸಮ್ಮೋಹಿಸುತ್ತೆ.
ಕಾಡು ಗಿಡ ಮರಗಳಿಂದ ಆವರಿಕೊಂಡಿರುವ ನಂದಿ ಬೆಟ್ಟ ನಿತ್ಯ ಸಾವಿರಾರು ದೇಸಿ ವಿದೇಶಿ ಪ್ರವಾಸಿಗರನ್ನ ಆಕರ್ಶಿಸುತ್ತೆ.
ಇಂತಹ ನಂದಿ ಇರೋದು ನಮ್ಮ ಕರ್ನಾಟಕದಲ್ಲಿ ಅದ್ರಲ್ಲೂ ಸಿಲಿಕಾನ್ ಸಿಟಿಗೆ ಅತ್ಯಂತ ಸಮೀಪದಲ್ಲಿ.
ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿ ಬೆಟ್ಟ ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ತಾಣ..
ಮೋಡವೇ ಹೊದ್ದಂತೆ, ಬೀಸುವ ಗಾಳಿಗೆ ಮೋಡದೊಳಗೆ ಹೊಕ್ಕಂತೆ ಭಾಸವಾಗುತ್ತಾ, ಸುತ್ತಲೂ ಆವರಿಸಿರುವ ಮೋಡದಿಂದ ಜಿನುಗುವ ಹನಿನೀರಿಗೆ ಮೈಯೊಡ್ಡುವ ಸುಖಕ್ಕಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ನಂದಿಬೆಟ್ಟಕ್ಕೆ ಪ್ರವಾಸಿಗರು ಎಲ್ಲ ಕಾಲಗಳಲ್ಲೂ ಭೇಟಿ ನೀಡುತ್ತಾರೆ.
ಸೊಗಸು ಕಾಣುವ ರೋಮಾಂಚಕ ಅನುಭವ ನೀಡುವ ನಂದಿಬೆಟ್ಟ ನೋಡುವುದೇ ಕಣ್ಣಿಗೆ ಹಬ್ಬ.
ಚಳಿಗಾಲದಲ್ಲಿ ಮುಂಜಾನೆ ಮಂಜು ಮತ್ತು ಚಳಿಯ ನಡುವೆ ಓಡಾಡುವುದೇ ಒಂದು ಸೊಗಸು. ನಂದಿ, ಮುದ್ದೇನಹಳ್ಳಿ, ಕಣಿವೆನಾರಾಯಣಪುರ ಪಟ್ಟಣಗಳಿಂದ ಸುತ್ತುವರೆದಿರುವ ಈ ಪ್ರಸಿದ್ಧ ಬೆಟ್ಟ ಸಾಂಸ್ಕೃತಿಕವಾಗಿ ಅರ್ಕಾವತಿ ನದಿಯ ಮೂಲ ಎನ್ನಲಾಗಿದೆ.
ಇನ್ನೂ ನಂದಿ ಸುತ್ತ ಅನೇಕ ದಂತಕಥೆಗಳಿವೆ. ಯೋಗ ನಂದೀಶ್ವರರು ಇಲ್ಲಿ ತಪಸ್ಸನ್ನಾಚರಿಸಿದ್ದರಿಂದ ಇದಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿತು ಎಂಬುದು ಇದರಲ್ಲಿ ಒಂದು.
ಈ ಬೆಟ್ಟವನ್ನು ದೂರದಿಂದ ನೋಡಿದರೆ ಮಲಗಿರುವ ನಂದಿಯ ಹಾಗೆ ಕಾಣುವುದರಿಂದ ಇದಕ್ಕೆ ನಂದಿ ಬೆಟ್ಟವೆಂದು ಕರೆಯಲಾಗುತ್ತದೆ ಎಂದೂ ಸಹ ಹೇಳಲಾಗುತ್ತದೆ.
1300 ವರ್ಷಗಳಷ್ಟು ಪುರಾತನವಾದ ದ್ರಾವಿಡ ಶೈಲಿಯ ನಂದಿ ದೇವಸ್ಥಾನದಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನುವ ಮತ್ತೊಂದೆ ಕಥೆಯೂ ಇದೆ.
ಇನ್ನೂ ಗಾಂಧಿನಿಲಯ ಬಳಿ ನಿಂತರೆ ಬೆಟ್ಟದ ಮೇಲಿಂದ ಮನೋಹರ ದೃಶ್ಯಗಳಿಗೆ ಪ್ರವಸಿಗರು ಮನಸೋಲೋದು ಪಕ್ಕಾ..
ಗಾಂಧಿ ನಿಲಯ ಕ್ಯಾಪ್ಟನ್ ಕನ್ನಿಂಗ್ ಹ್ಯಾಂ ಕಟ್ಟಿಸಿದ್ದ ಬಂಗಲೆ `ಓಕ್ ಲ್ಯಾಂಡ್ಸ್’ ಅನ್ನು ಹೆಸರು ಬದಲಿಸಿ ಸರ್ಕಾರ, 1936ರಲ್ಲಿ ಮಹಾತ್ಮ ಗಾಂಧಿಯವರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ `ಗಾಂಧಿ ನಿಲಯ’ ಎಂದು ಮರುನಾಮಕರಣ ಮಾಡಿದ್ದಾರೆ.
ನಂದಿ ಬೆಟ್ಟ ತಲುಪಲು ಬೆಂಗಳರಿನಿಂದ ಸುಗಮ. ಇಲ್ಲಿಗೆ ತಲುಪಲು ರೈಲು, ಏರೋಪ್ಲೇನ್, ಹಾಗೂ ಬಸ್ ವ್ಯವಸ್ಥೆಯೂ ಇದೆ..
ಇನ್ನೂ ಬೈಕ್ ನಲ್ಲಿ ಕಾರ್ ನಲ್ಲಿ ಹೋಗೋ ಮಜಾನೆ ಬೇರೆ ಸುತ್ತಲಿನ ಪ್ರಕೃತಿಯ ನೋಟವನ್ನ ಸವಿಯುತ್ತಾ ಅಲ್ಲಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳೋ ಕ್ರೇಜ್ ಇರೋರಿಗೆ ಹೇಳಿ ಮಾಡಿಸಿದ ತಾಣವಿದು.
ಖಾಸಗಿ ಹಾಗೂ ಸರ್ಕಾರಿ ಬಸ್ ಗಳ ಮೂಲಕ ನಂಬಿಬೆಟ್ಟಕ್ಕೆ ತಲುಪಬಹುದು..
ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗವೆಂದೇ ಪ್ರಸಿದ್ಧಿ ಪಡೆದಿರುವ ನಂದಿ ಬೆಟ್ಟದ ರಮಣೀಯ ನೋಟಕ್ಕೆ ಎಂಥವರೇ ಆದರೂ ಮಾರಿಹೋಗ್ತಾರೆ.
ಇನ್ನೂ ಬೈಕ್ ನಲ್ಲಿ ಕಾರ್ ನಲ್ಲಿ ಹೋಗೋ ಮಜಾನೆ ಬೇರೆ ಸುತ್ತಲಿನ ಪ್ರಕೃತಿಯ ನೋಟವನ್ನ ಸವಿಯುತ್ತಾ ಅಲ್ಲಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳೋ ಕ್ರೇಜ್ ಇರೋರಿಗೆ ಹೇಳಿ ಮಾಡಿಸಿದ ತಾಣವಿದು.