ಮೈಸೂರು: ಹಿರಿಯ ಹೋರಾಟಗಾರ ದಿ. ನಂಜುಂಡಸ್ವಾಮಿ ಹಾಗೂ ಪ.ಮಲ್ಲೇಶ್ ಅವರ ಪರಿಚಯ ಇರದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಗರದ ರಮಾಗೋವಿಂದ ರಂಗಮಂದಿರದಲ್ಲಿ ಹಿರಿಯ ಪ್ರಗತಿಪರ ಚಿಂತಕ ದಿವಂಗತ ಪ.ಮಲ್ಲೇಶ್ ರಚಿಸಿದ್ದ ಬುದ್ಧ ನಾಗಾರ್ಜುನರ ಶೂನ್ಯಯಾನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ದಿನಗಳಿಂದಲೂ ಮಲ್ಲೇಶ್ ಅವರೊಂದಿಗೆ ನನಗೆ ಒಡನಾಟವಿತ್ತು. ರಾಜಕೀಯವಾಗಿ ನಮ್ಮಿಬ್ಬರದೂ ಆತ್ಮೀಯ ಸಂಬಂಧ. ದಿ. ಪ.ಮಲ್ಲೇಶ್ ಅಪ್ಪಟ ಸಮಾಜವಾದಿ. ಬರೆಯುವ ಸಾಮರ್ಥ್ಯವಿದ್ದರೂ ಹೆಚ್ಚಿನ ಸಮಯ ಹೋರಾಟಕ್ಕೆ ಮೀಸಲಿಟ್ಟರು. ಮನಸ್ಸು ಮಾಡಿದ್ದರೆ ಹಲವಾರು ಕೃತಿಗಳನ್ನು ಬರೆಯಬಹುದಿತ್ತು. ಅವರಿಗೆ ಎದೆಗಾರಿಕೆ ಕೂಡ ಅವರಿಗೆ ಇತ್ತು ಎಂದು ಹೇಳಿದ್ದಾರೆ.
ಅಲ್ಲದೇ, ಈ ಸಂದರ್ಭದಲ್ಲಿ ತುರ್ತ ಪರಿಸ್ಥಿತಿ ದಿನಗಳನ್ನು ಮೆಲಕು ಹಾಕಿದ ಅವರು, ಇನ್ಸ್‌ಪೆಕ್ಟರ್ ಒಬ್ಬಾತ ನನ್ನನ್ನು ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದ. ನಂತರ ಬೆಳಿಗ್ಗೆ ನನ್ನನ್ನು ಠಾಣೆಯಿಂದ ಕಳುಹಿಸಿದ್ದರು ಎಂದು ಹೇಳಿದ್ದಾರೆ.