ಗದ್ದಲಕ್ಕೆ ಕಲಾಪ ಬಲಿ : ವಿಪಕ್ಷಗಳಿಗೆ ಚಳಿ ಬಿಡಿಸಿದ ಮೋದಿ
ನವದೆಹಲಿ : ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶ ಆರಂಭವಾಗಿದೆ. ಆದ್ರೆ ಮೊದಲ ದಿನದ ಕಲಾಪ ಪ್ರತಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದೆ. ಉಭಯ ಸದನಗಳಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ನಾಳೆ 11 ಗಂಟೆಗೆ ಕಲಾಪ ಮುಂದೂಡಿಕೆ ಮಾಡಲಾಗಿದೆ.
ಇಂದು ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಿಗೆ ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವರನ್ನು ಪರಿಚಯಿಸಿದರು. ಈ ವೇಳೆ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಇದರಿಂದ ಬೇಸರಗೊಂಡ ಪ್ರಧಾನಿ ನರೇಂದ್ರ ಮೋದಿ, ಇಂತಹ ಮನಸ್ಥಿತಿ ಇರುವ ವಿಪಕ್ಷ ಸದಸ್ಯರನ್ನು ಸಂಸತ್ತು ಈ ಹಿಂದೆ ಯಾವತ್ತೂ ಕೂಡ ಕಂಡಿಲ್ಲ ಎಂದು ಕಿಡಿಕಾರಿದರು.
ಇನ್ನು ಸಂಪುಟಕ್ಕೆ ಹೊಸದಾಗಿ ಮಹಿಳೆಯರು, ಎಸ್‍ಸಿ/ಎಸ್‍ಟಿ ಹಾಗೂ ಇನ್ನಿತರ ಸಮುದಾಯಕ್ಕೆ ಸೇರಿದವರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಪುಟ ಸೇರಿಕೊಂಡಿದ್ದು, ಇದು ವಿಪಕ್ಷದ ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.