Nasa Pays to sleep : 1.5 ಲಕ್ಷ ಸಂಬಳ ಸಿಗುತ್ತದೆ..!! ನಿದ್ದೆ ಮಾಡೋದಷ್ಟೇ ಕೆಲಸ..!!!
ಕೆಲಸ ಸಿಗದೇ ಇಡೀ ವಿಶ್ವಾದ್ಯಂತ ೆಷ್ಟೋ ಜನ ಪರದಾಡುತ್ತಿದ್ದಾರೆ.. ವಿವಿದ್ಯಾವಂತರೂ ಕೂಡ ನಿರುದ್ಯೋಗಿಗಳಾಗಿ ಕೆಲಸ ಸಿಗದೆ ಒದ್ದಾಡ್ತಿದ್ದಾರೆ.. ಈ ನಡುವೆ ನಾಸಾ ಒಂದು ಬಂಪರ್ ಆಫರ್ ಕೊಟ್ಟಿದೆ..
ಆಫರ್ ಸಿಂಪಲ್ 2 ತಿಂಗಳು ನಿರಂತರ ನಿದ್ದೆ ಮಾಡಬೇಕು… 1.5 ಲಕ್ಷ ಸಂಬಳ ಸಿಗುತ್ತದೆ.. Nasa ದ ಈ ಆಫರ್ ಕೇಳಿ ಎಲ್ಲರೂ ಉಬ್ಬೇರಿಸಿದ್ದಾರೆ..
ಹೌದು..!!
ಪ್ರಸ್ತುತ, ಕೃತಕ ಗುರುತ್ವಾಕರ್ಷಣೆಯು ಮಾನವ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು NASA ಸಂಶೋಧನೆಗೆ ಮುಂದಾಗಿದ್ದು , ಸ್ವಯಂ ಸೇವಕರಿಗೆ $18,500 (ರೂ. 1,53,1920) ಕ್ಕೆ ಎರಡು ತಿಂಗಳು ಹಾಸಿಗೆಯಲ್ಲಿ ಮಲಗುವ ಅವಕಾಶವನ್ನು ನೀಡುತ್ತಿದೆ.
NASA ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಜರ್ಮನ್ ಏರೋಸ್ಪೇಸ್ ಸೆಂಟರ್ ನಲ್ಲಿ ಕೃತಕ ಗುರುತ್ವಾಕರ್ಷಣೆಯ ಬೆಡ್ ರೆಸ್ಟ್ ಸ್ಟಡಿ (AGBRESA) ಅನ್ನು ಪ್ರಾರಂಭಿಸಲಿದೆ..
ಬಾಹ್ಯಾಕಾಶಕ್ಕೆ ತೆರಳುವ ಯಾತ್ರಿಗಳು ಹಾಗೂ ವೈಜ್ಞಾನಿಕರು ಪ್ರಸ್ತುತ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮತ್ತು ಪ್ರಯೋಗಗಳನ್ನು ಮಾಡುತ್ತಾರೆ.
ಇದರಿಂದ ಶರೀರದ ಮೇಲೆ ಕೆಲ ನಕಾರಾತ್ಮಕ ಪ್ರಭಾವಗಳು ಬೀಳುತ್ತವೆ. ಹೀಗಾಗಿ ಸಂಸ್ಥೆ ಇದೆ ಮೊದಲ ಬಾರಿಗೆ ಕೃತಕ ಗುರುತ್ವಾಕರ್ಷಣೆಯ ಪ್ರಭಾವವನ್ನು ತಿಳಿಯಲು ಮತ್ತು ಪರೀಕ್ಷಿಸಲು ಬಯಸುತ್ತಿದೆ.
ಈ ಪ್ರಯೋಗದ ಭಾಗವಾಗಲು 24 ರಿಂದ 55 ವರ್ಷ ವಯಸ್ಸಿನ್ನೊಳಗಿನ 12 ಪುರುಷ ಮತ್ತು 12 ಮಹಿಳಾ ಸದಸ್ಯರು ಬೇಕಾಗಿದ್ದಾರೆ. ಆದರೆ, ಅವರು ಜರ್ಮನ್ ಭಾಷೆ ತಿಳಿದವರಾಗಿರಬೇಕು.
ಮಲಗಿರುವ ಸ್ಥಿತಿಯಲ್ಲಿಯೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು.. ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ಸದಸ್ಯರಿಗಾಗಿ ಜರ್ಮನಿಯ ಏರೋಸ್ಪೇಸ್ ಸೆಂಟರ್ ನ ಏರೋಸ್ಪೇಸ್ ಮೆಡಿಸಿನ್ ಇನ್ಸ್ಟಿಟ್ಯೂಟ್ ನಲ್ಲಿ ಈ ವಿಶೇಷ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಒರಿಯಂಟೆಷನ್ ನಿಂದ ಹಿಡಿದು ಒಟ್ಟು 89 ದಿನಗಳವರೆಗೆ ಸದಸ್ಯರು ಅಲ್ಲಿ ಕಾಲ ಕಳೆಯಬೇಕಾಗಲಿದೆ. ಇದರಲ್ಲಿ ಒಟ್ಟು 60 ದಿನಗಳ ಬೆಡ್ ರೆಸ್ಟ್ ಶಾಮೀಲಾಗಿವೆ. ಈ ಅವಧಿಯಲ್ಲಿ ಅವರು ತಿಂಡಿ ತಿನಿಸು ಸೇರಿದಂತೆ ತಮ್ಮ ದಿನನಿತ್ಯದ ಎಲ್ಲಾ ಕೆಲಸಗಳನ್ನು ಹಾಸಿಗೆಯಲ್ಲಿ ಮಲಗಿಕೊಂಡೆ ನಿರ್ವಹಿಸಬೇಕಾಗುತ್ತದೆ..