ಮಂಗಳ ಗ್ರಹದ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ನಾಸಾ
ವಾಷಿಂಗ್ಟನ್, ಅಗಸ್ಟ್ 14: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಗುರುವಾರ ಟ್ವಿಟ್ಟರ್ ನಲ್ಲಿ ಮಂಗಳ ಗ್ರಹದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದೆ. ಕೆಂಪು ಗ್ರಹ ಎಂದೂ ಕರೆಯಲ್ಪಡುವ ಮಂಗಳವು ಸೂರ್ಯನಿಂದ ನಾಲ್ಕನೇ ಗ್ರಹ ಮತ್ತು ಸೌರವ್ಯೂಹದ ಎರಡನೇ ಅತಿ ಚಿಕ್ಕ ಗ್ರಹವಾಗಿದೆ.
ನಾಸಾ ತನ್ನ ಪೋಸ್ಟ್ನಲ್ಲಿ ಹಂಚಿಕೊಂಡ ಮಂಗಳನ ಚಿತ್ರಗಳು ಮನಮೋಹಕವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾಸಾ ಹಂಚಿಕೊಂಡ ಕೂಡಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬ್ಯೂಟಿಫುಲ್ ಮಾರ್ಸ್! ರೆಡ್ ಪ್ಲಾನೆಟ್ ನ ವಾತಾವರಣ, ಹವಾಮಾನ, ಉಪ-ಮೇಲ್ಮೈ ನೀರು ಮತ್ತು ಹೆಚ್ಚಿನದನ್ನು ಅಧ್ಯಯನ ಮಾಡಲು ನಮ್ಮ ಮಾರ್ಸ್ ರೆಕಾನೈಸನ್ಸ್ ಆರ್ಬಿಟರ್ ಅನ್ನು15 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಆದರೆ ಈ ಮಿಷನ್ ತನ್ನ @ ಹೈರಿಸ್ ಕ್ಯಾಮರಾ ಕಳುಹಿಸಿದ ಚಿತ್ರಗಳಿಗೆ ಹೆಸರುವಾಸಿಯಾಗಿದೆ ಎಂದು ನಾಸಾ ಶೀರ್ಷಿಕೆಯಲ್ಲಿ ತಿಳಿಸಿದೆ.
ನಾಸಾದ ಪೋಸ್ಟ್ ಕೆಲವೇ ಸಮಯದಲ್ಲಿ 20,000 ಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು 4,000 ರಿಟ್ವೀಟ್ಗಳನ್ನು ಗಳಿಸಿದೆ