ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021ರ ಮೊದಲ `ಮನ್ ಕೀ ಬಾತ್ ಬಾತ್’ ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನವಾಗಿದ್ದು ಶಾಕ್ ಆಯಿತು ಎಂದು ಮನ್ ಕೀ ಬಾತ್‍ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಗಣರಾಜ್ಯೋತ್ಸವಂದು ರೈತರು ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ದೆಹಲಿಯ ಕೆಂಪುಕೋಟೆ ಮೇಲೆ ನುಗ್ಗಿದ ಕಿಡಿಗೇಡಿಗಳು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ನಾನು ಒಬ್ಬನೇ ಅಲ್ಲ, ಇಡೀ ದೇಶಕ್ಕೆ ಶಾಕ್ ಆಗಿದೆ ಎಂದರು.

73ನೇ ರೇಡಿಯೋ ಸರಣಿಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಕಳೆದ ವರ್ಷ ಕೊರೊನಾ ಸಂಕಷ್ಟದಿಂದ ನಲುಗಿದ್ದರೂ ಹೊಸ ಭರವಸೆಗಳೊಂದಿಗೆ ಮುನ್ನುಗ್ಗುತ್ತಿದ್ದೇವೆ. ಇದು ನಮ್ಮ ನಾಳ್ಮೆ ಹಾಗೂ ಧೈರ್ಯದ ಫಲ. ಹೀಗಾಗಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನಾವು ಈ ವರ್ಷ ಮತ್ತಷ್ಟು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಪದ್ಮ ಪುರಸ್ಕೃತರಿಗೆ ಮೋದಿ ಅಭಿನಂದನೆ
ಪ್ರಸಕ್ತ ವರ್ಷದ ಪದ್ಮ ಪುರಸ್ಕಾರಗಳಿಗೆ ಭಾಜನರಾದ ಎಲ್ಲಾ ಸಾಧಕರನ್ನು ಅಭಿನಂದಿಸಿದ ನರೇಂದ್ರ ಮೋದಿ, ದೇಶದ ಜನರು ಈ ಸಾಧಕರಿಂದ ಸ್ಫೂರ್ತಿ ಪಡೆಯಬೇಕು ಎಂದರು.
ಟೀಂ ಇಂಡಿಯಾ ತಂಡಕ್ಕೆ ಶ್ಲಾಘನೆ
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ ತಂಡವನ್ನು ಶ್ಲಾಘಿಸಿದ ಮೋದಿ, ಸರಣಿಯ ಮೊದಲ ಪಂದ್ಯ ಸೋತರು ಅದ್ಭುತವಾಗಿ ಪುಟಿದೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಇದು ಭಾರತ ತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನ
ಭಾರತವು ಜಗತ್ತಿನ ಅತಿದೊಡ್ಡ ಕೊರೊನಾ ಲಸಿಕಾ ಅಭಿಯಾನ ನಡೆಸುತ್ತಿದೆ. ಮೇಡ್ ಇನ್ ಇಂಡಿಯಾ ಲಸಿಕೆಯು ಸ್ವಾವಲಂಬಿ ಭಾರತದ ಸಂಕೇತ ಅಷ್ಟೇ ಅಲ್ಲ. ನಮ್ಮ ಸ್ವಾಭಿಮಾನದ ಸಂಕೇತವೂ ಆಗಿದೆ ಎಂದು ಮೋದಿ ತಮ್ಮ ಮನ್ ಕೀ ಬಾತ್‍ನಲ್ಲಿ ಕೊಂಡಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








