National Kabaddi Championship | ಕರ್ನಾಟಕ ತಂಡಕ್ಕೆ ಪ್ರಶಾಂತ್ ರೈ ಸಾರಥಿ
ಹರಿಣಾಣದ ಚಾರ್ಕಿ ದಾದ್ರಿಯಲ್ಲಿ ಜುಲೈ 21 ರಿಂದ ಆರಂಭವಾಗಲಿರುವ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರಶಾಂತ್ ರೈ ಅವರು ಮುನ್ನಡೆಸಲಿದ್ದಾರೆ.
ಹರಿಯಾಣದ ಚಾರ್ಕಿ ದಾದ್ರಿಯಲ್ಲಿ ಜುಲೈ 21ರಿಂದ ಜುಲೈ 24ರವರೆಗೆ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಷಿಪ್ ನಡೆಯಲಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಲಿವೆ.
ಈ ಬಾರಿಯ ಟೂರ್ನಿಗೆ ಕರ್ನಾಟಕ ಕಬ್ಬಡಿ ಸಂಸ್ಥೆಯು 12 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.

ಕರ್ನಾಟಕ ತಂಡ ಹೀಗಿದೆ
ಪ್ರಶಾಂತ್ ರೈ (ನಾಯಕ)
ಸುಕೇಶ್ ಹೆಗ್ಡೆ
ರತನ್ ಗೌಡ
ಎಸ್. ರಕ್ಷೀತ್
ಸಚಿನ್ ಸುವರ್ಣ
ಪಿ. ಸಚಿನ್
ಅರ್ಮುಗಂ
ಸೋಮ
ರಾಕಿ ಗಣೇಶ್
ಆಫ್ರೀದ್ ಮಹಮ್ಮದ್
ನರೇಂದ್ರ
ಎನ್. ಅಭಿಷೇಕ್