ಮಕ್ಕಳ ಪ್ರೋಗ್ರಾಂಗಳಲ್ಲಿ ಜಾಹಿರಾತು ತೋರಿಸದಿರಲು ಮುಂದಾದ ‘ನೆಟ್ ಫ್ಲಿಕ್ಸ್’
ಆನ್ಲೈನ್ ಒಟಿಟಿ ಪ್ಲಾಟ್ ಫಾರ್ಮ್ ನೆಟ್ ಫ್ಲಿಕ್ಸ್ ಮಕ್ಕಳ ಚಲನಚಿತ್ರಗಳು ಮತ್ತು ಟವಿ ಸರಣಿಯ ಸಮಯದಲ್ಲಿ ಜಾಹೀರಾತು ತೋರಿಸದಿರಲು ಚಿಂತನೆ ನಡೆಸುತ್ತದೆ. ಈಗಾಗಾಲೆ ನೆಟ್ ಫ್ಲಿಕ್ಸ್ ಪ್ರತಿಸ್ಪರ್ದಿ ಡಿಸ್ನಿ+ ಮೇ ನಿಂದ ಮಕ್ಕಳ ಪ್ರೋಗ್ರಾಂಗಳನ್ನ ಜಾಹಿರಾತು ಮುಕ್ತವಾಗಿಟ್ಟಿದೆ.
ಮಕ್ಕಳ ಪ್ರೋಗ್ರಾಂಗಳು ಜಾಹಿರಾತು ಮುಕ್ತವಾಗಿರುತ್ತದೆ ಎಂದು ನೆಟ್ ಫ್ಲಿಕ್ಸ್ ತನ್ನ ಪಾಲುದಾರರಿಗೆ ತಿಳಿಸಿದೆ. ಆದರೂ ಮೂಲ ಸರಣಿಗಳಾದ ಸ್ಟ್ರೇಂಜರ್ ಥಿಂಗ್ಸ್ ಬ್ರಿಡ್ಜರ್ಟನ್ ಮತ್ತು ಸ್ಕ್ವಿಡ್ ಗೇಮ್ ಗಳಲ್ಲಿ ಇನ್ನೂ ಜಾಹೀರಾತು ನೋಡುವ ನಿರೀಕ್ಷೆ ಇದೆ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನಂತಹ ಸಂಸ್ಥೆಗಳು ಮಕ್ಕಳಿಗೆ ಜಾಹೀರಾತಿನ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳಿಗೆ ಕರೆ ನೀಡಿವೆ.
ನೆಟ್ ಫ್ಲಿಕ್ಸ್ ಜಾಹೀರಾತು ಮಾರಾಟದಲ್ಲಿ ಮುಂಚೂಣಿ ಆಟಗಾರನಾಗಿದ್ದು ವರ್ಷಕ್ಕೆ ನಾಲ್ಕು ಲಕ್ಷ ಶತಕೊಟಿ ಡಾಲರ್ ನಷ್ಟು ಜಾಹೀರಾತುಗಳನ್ನ ಬಿತ್ತರಿಸುತ್ತದೆ. ತನ್ನ ನಷ್ಟವನ್ನ ಕಡಿಮೆ ಮಾಡಿಕೊಳ್ಳಲು ಮತ್ತು ಹೆಚ್ಚಿನ ಬಳೆಕೆದಾರರನ್ನ ಆಕರ್ಷಿಸಲು ಜಾಹೀರಾತಿ ಬೆಂಬಲಿತ ಶ್ರೇಣಿಯನ್ನ ತರಲು ನೆಟ್ ಫ್ಲಿಕ್ಸ್ ಮುಂದಾಗಿದೆ. ನೆಟ್ ಫ್ಲಿಕ್ಸ್ ಜಾಹೀರಾತು ಒಪ್ಪಂದಗಳನ್ನ ಮರು ಸಂಧಾನ ಮಾಡಿಕೊಳ್ಳುತ್ತಿದ್ದು, ಹೆಚ್ಚು ಪ್ರಬುದ್ಧ ಜಾಹೀರಾತು ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ಮೊದಲು ಪ್ರಾರಂಭಿಸಲಿದೆ. ನೆಟ್ ಫ್ಲಿಕ್ ಬಳಕೆದಾರರ ಸಂಖ್ಯೆ ಕ್ಷೀಣಿಸುತ್ತಿರುವ ಕಾರಣದಿಂದ ಹೊಸ ಜಾಹೀರಾತು ಬೆಂಬಲಿತ ಚಂದಾದಾರಿಕೆಯನ್ನ ತರಲು ಯೋಜಿಸುತ್ತಿದೆ.