ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ನಟ ಸೂರಜ್ ಗೌಡ ಮತ್ತು ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಚಿತ್ರದ ಬಗ್ಗೆ ಇದೀಗ ಗಾಳಿ ಸುದ್ದಿಯೊಂದು ಹರಿದಾಡ್ತಿದ್ದು, ಹಲ್ ಚಲ್ ಸೃಷ್ಟಿಸಿದೆ. ಚಿತ್ರತಂಡದ ಜೊತೆ ವೈಮನಸ್ಸಿನಿಂದ ನಿರ್ದೇಶಕರು ಸಿನಿಮಾದಿಂದ ಹೊರಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದ್ದು, ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿ ಹೊತ್ತಿದ್ದ ಸುಮನ್ ಜಾದೂಗರ್ ಅವರು ಸಿನೆಮಾದಿಂದ ಹೊರಗುಳಿದ ನಂತರ ಚಿತ್ರದ ನಾಯಕ ಸೂರಜ್ ಅವರೇ ನಿರ್ದೇಶಕರಾಗಿ ಸಿನಿಮಾ ಮುಂದುವರೆಸಿಕೊಂಡು ಹೋಗಿದ್ದಾರೆ. ಆದರೆ ಸುಮನ್ ನಿರ್ದೇಶನದಿಂದ ಹೊರಗುಳಿದಿದ್ದ ಕಾರಣ ಯಾರಿಗೂ ತಿಳಿದಿರಲಿಲ್ಲ. ಇದೀಗ ಈ ಬಗ್ಗೆ ಸುದ್ದಿಯೊಮದು ವ್ಯಪಕವಾಗಿ ಹಬ್ಬಿದ್ದು, ಚಿತ್ರತಂಡದ ಜೊತೆಗಿನ ವೈಮನಸ್ಸೇ ಕಾರಣ ಎನ್ನಲಾಗಿದೆ. ಆದ್ರೆ ಈ ಬಗ್ಗೆ ನಿರ್ದೇಶಕ ಸುಮನ್ ಜಾದೂಗರ್ ಸ್ಪಷ್ಟನೆ ನೀಡಿದ್ದು, ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆಕ್ಸಿಡೆಂಟ್ ಆಗಿ ತುಂಬಾ ಸಮಸ್ಯೆ ಅನುಭವಿಸಿದೆ, ಆ ನಂತರ ಸೂರಜ್ ಅವರೆ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಇಲ್ಲ, ಆದರೆ ಸಿನಿಮಾ ಜೊತೆ ಇದ್ದೀನಿ. ಅನೇಕರು ವಿವಾದ ಮಾಡಿಕೊಂಡು ದೂರ ಹೋಗಿದ್ದಾರೆ ಅಂತ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಸುಳ್ಳು” ಎನ್ನುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ
ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ...








