New Zealand Series | ಭಾರತ ಕ್ರಿಕೆಟ್ ತಂಡಕ್ಕೆ ಶುಭ್ ಮನ್ ಗಿಲ್ ಕ್ಯಾಪ್ಟನ್
ತವರಿನಲ್ಲಿ ನ್ಯೂಜಿಲೆಂಡ್ – ಎ ವಿರುದ್ಧದ ಸರಣಿಗೆ (ನಾಲ್ಕು ದಿನಗಳ ಟೆಸ್ಟ್ ಪಂದ್ಯ) ಭಾರತ-ಎ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ.
ಟೀಂ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಈ ತಂಡವನ್ನು ಮುನ್ನಡೆಸಲಿದ್ದಾರೆ.
ಏತನ್ಮಧ್ಯೆ, ಬಿಸಿಸಿಐ ಘೋಷಿಸಿದ ಈ ತಂಡದಲ್ಲಿ ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅಂತರರಾಷ್ಟ್ರೀಯ ಆಟಗಾರರಿದ್ದಾರೆ.
ಅದೇ ರೀತಿ ರಣಜಿ ಟ್ರೋಫಿಯಲ್ಲಿ (2021-22) ಅಮೋಘ ಪ್ರದರ್ಶನ ತೋರಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಮ್ಸ್ ಮೂಲಾನಿ, ಸರ್ಫರಾಜ್ ಖಾನ್ ಮತ್ತು ಯಶ್ ದುಬೆ ಅವರಿಗೂ ಅವಕಾಶ ಸಿಕ್ಕಿದೆ.

ಈ ಪ್ರವಾಸದ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಸೆಪ್ಟೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ನ್ಯೂಜಿಲೆಂಡ್-‘ಎ’ ಪ್ರವಾಸ ಆರಂಭವಾಗಲಿದೆ.
ಈ ಸರಣಿಯ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಅದೇ ರೀತಿ ಏಕದಿನ ಸರಣಿಗೆ ಚೆನ್ನೈ ವೇದಿಕೆಯಾಗಲಿದೆ.
ಭಾರತ-ಎ ತಂಡ: ಶುಭಮನ್ ಗಿಲ್ (ನಾಯಕ), ಯಶ್ ದುಬೆ, ಹನುಮ ವಿಹಾರಿ, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶುಭಂ ಶರ್ಮಾ, ಶುಭಂ. ಅಕ್ಷಯ್ ವಾಡ್ಕರ್, ಶಹಬಾಜ್ ಅಹ್ಮದ್, ಮಣಿಶಂಕರ್ ಮುರಸಿಂಘೆ