ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ : ಶೆಡ್ಯೂಲ್ ನಿಗದಿ

1 min read

ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ : ಶೆಡ್ಯೂಲ್ ನಿಗದಿ

ಐಸಿಸಿ ಟಿ20 ವಿಶ್ವಕಪ್ ಈಗಷ್ಟೇ ಮುಗಿದಿದೆ. ನ್ಯೂಜಿಲೆಂಡ್ ತಂಡವನ್ನು ಫೈನಲ್ನಲ್ಲಿ ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್ ಆದ ಆಸ್ಟ್ರೇಲಿಯಾ ಇನ್ನೂ ಸಲೆಬ್ರೇಷನ್ ಮುಗಿಸಿಲ್ಲ.

ಆದರೆ ಅದಾಗಲೇ ಐಸಿಸಿ ಮುಂದಿನ ಟೂರ್ನಿಗೆ ಶೆಡ್ಯೂಲ್ ಪ್ರಕಟಿಸಿದೆ. ಮುಂದಿನ ವರ್ಷವೇ ಐಸಿಸಿ ಟಿ20 ವಿಶ್ವಕಪ್ನ ಇನ್ನೊಂದು ಆವೃತ್ತಿ ನಡೆಯಲಿದೆ.

ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಮುಂದಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. 2022ರ ಅಕ್ಟೋಬರ್ 16ರಿಂದ 8ನೇ ಆವೃತ್ತಿಯ ಟಿ20 ವಿಶ್ವಕಪ್ ಮಹಾಸಮರ ಆರಂಭವಾಗಲಿದೆ.

ಆಸ್ಟ್ರೇಲಿಯಾದ 7 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಅಡಿಲೇಡ್, ಬ್ರಿಸ್ಬೇನ್, ಗಿಲಾಂಗ್, ಹೋಬರ್ಟ್, ಮೆಲ್ಬರ್ನ್, ಪರ್ತ್ ಹಾಗೂ ಸಿಡ್ನಿಯಲ್ಲಿನ ಮೈದಾನಗಳಲ್ಲಿ ಮುಂದಿನ ವಿಶ್ವಕಪ್ ಹೋರಾಟ ನಡೆಯಲಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ಫೈನಲ್ ಪಂದ್ಯಕ್ಕೆ ಸಾಕ್ಷಿ ಆಗಲಿದೆ.

Australia saaksha tv

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿವೆ. 2021ರ ವಿಶ್ವಕಪ್ನ ಸೂಪರ್-12 ಹಂತದಲ್ಲಿ ಆಡಿದ 12 ತಂಡಗಳು ನೇರ ಅರ್ಹತೆ ಪಡೆದಿವೆ.

ಇನ್ನು 4 ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಯಲಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ಒಟ್ಟು 45 ಪಂದ್ಯಗಳು ನಡೆಯಲಿವೆ.

ಸಿಡ್ನಿ ಮತ್ತು ಅಡಿಲೇಡ್ ಕ್ರೀಡಾಂಗಣಗಳಲ್ಲಿ ನವೆಂಬರ್ 9 ಮತ್ತು 10ರಂದು ಸೆಮಿಫೈನಲ್ಸ್ ನಿಗದಿ ಮಾಡಲಾಗಿವೆ. ಮೆಲ್ಬರ್ನ್ ಫೈನಲ್ ಪಂದ್ಯಕ್ಕೆ ಆತಿಥ್ಯ ನೀಡಲಿದೆ.

2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್–ಅಪ್ ನ್ಯೂಜಿಲೆಂಡ್ ಜೊತೆಗೆ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್–12 ಹಂತಕ್ಕೆ ನೇರ ಪ್ರವೇಶ ಪಡೆದಿವೆ.

ಉಳಿದ ನಾಲ್ಕು ತಂಡಗಳು ಗುಂಪು ಹಂತದಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಲಿವೆ.

2012 ಮತ್ತು 2016ರಲ್ಲಿ ಚಾಂಪಿಯನ್ ಆಗಿರುವ ವೆಸ್ಟ್ಇಂಡೀಸ್, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ, 2021ರ ಟೂರ್ನಿಯ ಸೂಪರ್-12 ಹಂತದಲ್ಲಿ ಆಡಿರುವ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಅರ್ಹತಾ ಸುತ್ತಿನಲ್ಲಿ ಆಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಆಸ್ಟ್ರೇಲಿಯಾದ ಸಂಭ್ರಮ ಇನ್ನೂ ಮುಗಿದಿಲ್ಲವಾದರೂ ಮತ್ತೊಂದು ಟೂರ್ನಿಗೆ ಸಜ್ಜಾಗುವ ಸಮಯ ಬಂದಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd