ಮಾಜಿ ಶಾಸಕ ಬಿ ಎಂ ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ – ಮೊಮ್ಮಗನ ಪತ್ನಿ ಬಂಧನ

1 min read

ಮಾಜಿ ಶಾಸಕ ಬಿ ಎಂ ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ….

ಮಂಗಳೂರಿನಲ್ಲಿ ಮಾಜಿ ಶಾಸಕ  ಸಾಹಿತಿ ಇದಿನಬಬ್ಬ  ಅವರ ಮನೆ ಮೇಲೆ NIA  ಅಧಿಕಾರಿಗಳು ದಾಳಿನಡೆಸಿದ್ದಾರೆ. ಈ ವೇಳೆ ಅವರ ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಅವರನ್ನ ಅರೆಸ್ಟ್  ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.

 ಕಳೆದ ಆಗಸ್ಟ್ ತಿಂಗಳಲ್ಲಿ  ಇದಿನಬ್ಬ ಅವರ ಪುತ್ರ ಬಿ ಎಂ ಭಾಷ ಅವರ ಮನೆ ಮೇಲೆ  ಎನ್ ಐ ಅಧಿಕಾರಿಗಳು ದಾಳಿ ನಡೆಸಿದ್ದರು.  ಈ ವೇಳೆ ಭಾಷ ಅವರ ಕಿರಿಯ ಪುತ್ರ ಅನಾಸ್ ಅಬ್ದುಲ್  ರಹಮಾನ್ ಎಂಬಾತನ್ನನ  ಐಸಿಸ್ ಜೊತೆ ಸಂಪರ್ಕದಲ್ಲಿರುವ ಆರೋಪದ ಮೇಲೆ ಬಂಧಿಸಿದ್ದರು.  ಈ ಸಮಯದಲ್ಲಿ ಆತನ ಪತ್ನಿ ದೀಪ್ತಿಂ ಮರಿಯಂ ಅವರನ್ನ ವಿಚಾರಣೆ ನಡೆಸಿ ಕೈ ಬಿಟ್ಟಿದ್ದರು.  ಈಗ  ಐಸಿಸ್  ನೆಟ್ವರ್ಕ್ ಗೆ ಯುವಕರನ್ನ ಸೇರಿಸುವ ಜಾಲದಲ್ಲಿ ನಿರತರಾಗಿದ್ದಾರೆ ಎಂದು ಬಂಧಿಸಲಾಗಿದೆ.

ಕೊಡುಗು ಜಿಲ್ಲೆಯವರಾದ ದೀಪ್ತಿಂ ಮರಿಯಂ ಪ್ರೀತಿಸಿ ಅನಾಸ್ ಅಬ್ದುಲ್  ಎಂಬಾತನನ್ನ  ಮದುವೆಯಾಗಿದ್ದರು ನಂತರ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡಿದ್ದರು..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd