ಐಪಿಎಲ್ ನಡೆಯುತ್ತಾ..? ಕ್ರಿಕೆಟ್ ಜಾತ್ರೆಗೆ ನೈಟ್ ಕಫ್ರ್ಯೂ ಅಡ್ಡಿಯಾಗುತ್ತಾ..?
ಮುಂಬೈ : ಕ್ರಿಕೆಟ್ ಜಾತ್ರೆ ಐಪಿಎಲ್ ಹಂಗಾಮಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಕೆಲ ತಂಡಗಳು ಈಗಾಗಲೇ ತಾಲೀಮನ್ನ ಕೂಡ ಶುರು ಮಾಡಿಕೊಂಡಿವೆ.
ಇತ್ತ ಕ್ರಿಕೆಟ್ ಅಭಿಮಾನಿಗಳು ಕೂಡ ಐಪಿಎಲ್ ಕಿಕ್ ಹೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತ್ತಿದ್ದಾರೆ. ಆದ್ರೆ ಈ ಬಾರಿಯ ಐಪಿಎಲ್ ಗೂ ಕೊರೊನಾ ಅಡ್ಡಿ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತಿವೆ.
ಹೌದು..! ದೇಶದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆ ಜೋರಾಗಿದೆ. ಪ್ರತಿ ದಿನ ಅರ್ಧ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.
ಈ ಹಿನ್ನೆಲೆ ಕೆಲ ರಾಜ್ಯಗಳಲ್ಲಿ ಈಗಾಗಲೇ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ. ಇದು ಐಪಿಎಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಸದ್ಯ ಮಹಾರಾಷ್ಟ್ರದಲ್ಲಿ ಕೊರೊನಾ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ. ಇದರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳು ರದ್ದಾಗುವ ಸಾಧ್ಯತೆಗಳಿವೆ.
ಇನ್ನ ಕೊರೊನಾ ಕಾರಣದಿಂದಾಗಿ ಈ ಬಾರಿ ಮೈದಾನದಲ್ಲಿ ಪಂದ್ಯ ನೋಡಲು ಪ್ರೇಕ್ಷಕರಿಗೆ ನಿಷೇಧ ಹೇರಲಾಗಿದೆ.
ಆದರೆ ಪಂದ್ಯಾಟ ನಡೆಯುವ ವೇಳೆ ಆಟಗಾರರು ಮತ್ತು ಮೈದಾನದ ಇತರ ಸಿಬ್ಬಂದಿ ಈ ನೈಟ್ ನೈಟ್ ಕಫ್ರ್ಯೂ ನಿಂದ ಹೇಗೆ ಪಾರಾಗುವುದು ಎಂಬ ಚಿಂತೆಯಲ್ಲಿದ್ದಾರೆ.
ಇದೇ ಕಾರಣಕ್ಕೆ ಸೋಂಕು ಹೆಚ್ಚಾಗುತ್ತ ಸಾಗಿದರೆ ಪಂದ್ಯಾಟಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಕೂಡ ಚರ್ಚೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದು ಒಂದು ಕಡೆಯಾದ್ರೆ ಐಪಿಎಲ್ 9 ರಿಂದ ಐಪಿಎಲ್ ಪಂದ್ಯಗಳು ಆರಂಭವಾಗುತ್ತವೆ. ಸದ್ಯ ನಾವು ಮಾರ್ಚ್ ಅಂತ್ಯದಲ್ಲಿದ್ದು, ಏಪ್ರಿಲ್ ನಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಏಪ್ರಿಲ್ ಮತ್ತು ಮೇ ನಡುವೆ ಕೊರೊನಾ ಕಂಟ್ರೋಲ್ ತಪ್ಪಿದರೇ ರಾಜ್ಯಗಳು ಲಾಕ್ ಡೌನ್ ಅಥವಾ ಸೆಮಿ ಲಾಕ್ ಡೌನ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಒಂದು ವೇಳೆ ಏಪ್ರಿಲ್ ನಲ್ಲಿ ಕೊರೊನಾ ಹೆಚ್ಚಾಗಿ ಲಾಕ್ ಡೌನ್ ಅಥವಾ ಸೆಮಿ ಲಾಕ್ ಡೌನ್ ಜಾರಿ ಆದ್ರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಕಾದುನೋಡಬೇಕಾಗಿದೆ.
