ನೈಟ್ ನ್ಯೂಸ್ ಅಪ್ಡೇಟ್
1.

ದ್ವಿಚಕ್ರ ವಾಹನಗಳಿಗೆ ಸರ್ಕಾರ ಹೊರಡಿಸಿದೆ ಹೊಸ ಮಾರ್ಗಸೂಚಿ – ಇಲ್ಲಿದೆ ಸಂಪೂರ್ಣ ಮಾಹಿತಿ :
ದ್ವಿಚಕ್ರ ವಾಹನಗಳನ್ನು ಓಡಿಸುವ ಜನರಿಗೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಎಲ್ಲಾ ಮೋಟಾರು ಬೈಕ್‌ಗಳಿಗೆ ಹಿಂಬದಿ ಚಕ್ರದಲ್ಲಿ ಸೀರೆ ಗಾರ್ಡ್ ಗಳಾಗಿ ಸೇವೆ ಸಲ್ಲಿಸುತ್ತಿರುವ ರಕ್ಷಣಾತ್ಮಕ ಸಾಧನಗಳ ಜೊತೆಗೆ ಹ್ಯಾಂಡ್‌ಹೋಲ್ಡ್ ಮತ್ತು ಫುಟ್ ರೆಸ್ಟ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ
2.

ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಈಗ ಕೋವಿಡ್-19 ಕ್ವಾರಂಟೈನ್ ಕೇಂದ್ರ : ಕೊಲ್ಕತ್ತಾದ ಈಡನ್ ಗಾರ್ಡನ್.. ಅಂದ ತಕ್ಷಣ ನೆನಪಾಗೋದು ಕ್ರಿಕೆಟ್.. ಹೌದು, ಈಡನ್ ಗಾರ್ಡನ್ ಕ್ರೀಡಾಂಗಣವನ್ನು ಭಾರತದ ಕ್ರಿಕೆಟ್ ಕಾಶಿ ಅಂತ ಕರೆಯಲಾಗುತ್ತದೆ. ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿರುವ ಈಡನ್ ಗಾರ್ಡನ್ ಮೈದಾನಕ್ಕೆ ತನ್ನದೇ ಆದ ಇತಿಹಾಸವಿದೆ.
3.

ಗೋಕಳ್ಳರ ವಿರುದ್ಧ ಕ್ರಮಕ್ಕೆ ಆದೇಶಿಸಿದ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆ : .ಗೋಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆದೇಶಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ತಾಣಗಳಲ್ಲಿ ಕೊಲೆ ಬೆದರಿಕೆ ಬಂದಿರುವ ಮಾಹಿತಿ ಲಭ್ಯವಾಗಿದೆ.
4.

ಖಾಸಗಿ ಆಸ್ಪತ್ರೆಯ ಕಳ್ಳಾಟ ಬಿಚ್ಚಿಟ್ಟ ನಟಿ ಸುಧಾರಾಣಿ : ಹಿರಿಯ ನಟಿ ಸುಧಾರಾಣಿ ಅವರ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ ಬೆಂಗಳೂರಿನ ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ.
5.

ಪಾಕ್ ಸರಕಾರದಿಂದ ಕುಲಭೂಷಣ್ ಜಾಧವ್ ಕಾನ್ಸುಲರ್ ಭೇಟಿಗೆ ಸುಗ್ರೀವಾಜ್ಞೆ : ಪಾಕ್ ಸರಕಾರದಿಂದ ಕುಲಭೂಷಣ್ ಜಾಧವ್ ಗೆ ಕಾನ್ಸುಲರ್ಗಳನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆಪಾದಿತ ಭಾರತೀಯ ಗೂಡಾಚರ್ಯೆಯ ಕುಲಭೂಷಣ್ ಜಾಧವ್ ಅವರ ಅಪರಾಧದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಈ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ.








