“ಮೆಲ್ಲನೆ ಬೆರಳು ಬೆಸೆದು ನಡೆಯುವ ಚೂರು ದೂರ” ಅಂತ ನಾಯಕಿ ಜೊತೆ ನಿಖಿಲ್ ಡ್ಯುಯೆಟ್ : ರೈಡರ್ ಸಾಂಗ್ ರಿಲೀಸ್..!

1 min read

“ಮೆಲ್ಲನೆ ಬೆರಳು ಬೆಸೆದು ನಡೆಯುವ ಚೂರು ದೂರ” ಅಂತ ನಾಯಕಿ ಜೊತೆ ನಿಖಿಲ್ ಡ್ಯುಯೆಟ್ : ರೈಡರ್ ಸಾಂಗ್ ರಿಲೀಸ್..!

ಬೆಂಗಳೂರು : ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷೆಯ ರೈಡರ್ ಸಿನಿಮಾದ ಕೊಲೆಸ್ಟ್ರಾಲ್ ಸಾಂಗ್ ರಿಲೀಸ್ ಆಗಿದೆ..  ಈ ಹಾಡು ಪಕ್ಕಾ ಮೆಲೋಡಿ ಹಾಡಾಗಿದೆ..

ಇದು ರೈಡರ್ ಚಿತ್ರದಿಂದ ರಿಲೀಸ್ ಆದ ಎರಡನೇ ಹಾಡಾಗಿದೆ..  ಮೊದಲ ಹಾಡಿನಲ್ಲಿ ಡವ್ವಾ, ಡವ್ವಾ ಅಂತ ಹುಡುಗಿಯ ಹಿಂದೆ ಹೆಜ್ಜೆ ಹಾಕಿದ್ದ ನಟ ನಿಖಿಲ್ ಕುಮಾರ್, ಈಗ ಮೆಲ್ಲನೆ ಬೆರಳು ಬೆಸೆದು ನಡೆಯುವ ಚೂರು ದೂರ ಅಂತ  ನಾಯಕಿ ಜೊತೆಗೆ ಡ್ಯುಯೆಟ್‌  ಮಾಡುತ್ತಾ ಅಭಿಮಾನಿಗಳ ಮನಸೆಳೆದಿದ್ದಾರೆ..

 

ಈ ಹಾಡಿನ ನಿರ್ದೇಶನ ಮತ್ತು ಛಾಯಾಗ್ರಹಣ ಅಧ್ಬುತವಾಗಿದೆ.  ಕವಿರಾಜ್‌ ಬರೆದಿರುವ ಸಾಹಿತ್ಯಕ್ಕೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಲೇ ಲಡಾಕ್‌ನಲ್ಲಿ ಸಂಪೂರ್ಣ ಹಾಡಿನ ಚಿತ್ರೀಕರಣ ನಡೆದಿರೋದ್ರಿಂದ ಅಲ್ಲಿನ ಮನಸೂರೆಗೊಳಿಸುವ ಲೊಕೇಶನ್ಸ್ ಹಾಡಿಗೆ ಪ್ಲಸ್ ಪಾಯಿಂಟ್..  ಹಾಡಿಗೆ ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಇದೆ..

ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರ ತಂಡ ನಿರತವಾಗಿದೆ. ಇನ್ನು ಕೆಲವೇ ದಿನದಲ್ಲಿ ಸಿನಿಮಾದ ರಿಲೀಸ್‌ ದಿನಾಂಕವನ್ನು ಚಿತ್ರ ತಂಡ ಪ್ರಕಟ ಮಾಡಲಿದೆ.  ತೆಲುಗು ನಿರ್ದೇಶಕ ವಿಜಯ್‌ಕುಮಾರ್‌ ಕೊಂಡ ರೈಡರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd