ಯುವ ನಟ ನಿಶಾನ್ ನಾಣಯ್ಯ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. ಈಗಾಗಲೇ ತಮಿಳು, ಮಲೆಯಾಳಂ, ಹಿಂದಿನ ಬೆಂಗಾಳಿ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಿಶಾನ್ ನಾಣಯ್ಯ ಅವರು ಸ್ಟಾಂಡಲ್ ವುಡ್ ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ವೆಡ್ಡಿಂಗ್ ಗಿಫ್ಟ್ ಮೂಲಕ ಸೋನು ಗೌಡ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರದಲ್ಲಿ ನಿಶಾನ್ ನಾಣಯ್ಯ ಅವರು ನಾಯಕನಾಗಿ ನಟಿಸುತ್ತಿದ್ದಾರೆ.
ಯುವ ನಿರ್ದೇಶಕ ವಿಕ್ರಮ್ ಪ್ರಭು ಅವರು ಚಿತ್ರ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ವಿಕ್ರಂ ಪ್ರಭು ಫಿಲಂಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.
ಇನ್ನು ಚಿತ್ರದ ನಾಯಕಿ ಸೋನು ಗೌಡ ಚಿತ್ರದ ಬಗ್ಗೆ ಥ್ರಿಲ್ ಆಗಿಬಿಟ್ಟಿದ್ದಾರೆ. ಸೋನು ಗೌಡ ಅವರವನ್ನು ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ನೋಡಬಹುದಾಗಿದೆ,. ಈ ಚಿತ್ರದಲ್ಲಿ ಸೋನು ಕಾರ್ಪೋರೇಟ್ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆಯನ್ನು ಇವಾಗಿನ ಜನರೇಷನ್ ಅನ್ನು ಹೋಲಿಕೆ ಮಾಡಿಕೊಂಡು ಬರೆದಿದ್ದಾರೆ. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ. ಕಾರ್ಪೊರೇಟ್ ಲೈಫ್ ಸ್ಟೈಲ್ ನಲ್ಲಿರುವ ಹುಡುಗಿ ಮದುವೆಯಾದ ನಂತ್ರ ಹೇಗೆ ಜೀವನ ಸಾಗಿಸುತ್ತಾಳೆ ಎಂಬುದರ ಕುರಿತು ಚಿತ್ರ ಕಥೆಯನ್ನು ಬರೆಯಲಾಗಿದೆ. ನನ್ನ ಪಾತ್ರದ ಬಗ್ಗೆ ನನಗೆ ಖುಷಿ ಇದೆ. ಚಿತ್ರದ ಬಗ್ಗೆ ತುಂಬಾನೇ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಅಂತ ಹೇಳ್ತಾರೆ ಸೋನು ಗೌಡ.
‘ನಾನು ಹೈದರಾಬಾದ್ನವಳು’: ಕರ್ನಾಟಕದವಳು ಅನ್ನೋಕೆ ಅಷ್ಟೊಂದು ಅವಮಾನವೇ?; Rashmika Mandanna ವಿರುದ್ಧ ನೆಟ್ಟಿಗರು ಫುಲ್ ಗರಂ
ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನವರು ಎಂದು ಹೇಳಿಕೊಂಡಿದ್ದಕ್ಕೆ ಕರ್ನಾಟಕದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅವಮಾನಕರ ಎಂದು ಅನೇಕರು ಭಾವಿಸಿದ್ದಾರೆ. ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದ...