ಬಿಜೆಪಿಯಲ್ಲಿ ಅಸಮಾಧಾನಿತರು ಯಾರೂ ಇಲ್ಲ : ಕಟೀಲ್
ಹೊಸಪೇಟೆ : ನಮ್ಮ ಪಕ್ಷದಲ್ಲಿ ಅಸಮಾಧಾನಿತರು ಯಾರು ಇಲ್ಲ. ಅಸಮಾಧಾನಗೊಂಡವರನ್ನೆಲ್ಲಾ ನಾನು ಸಮಾಧಾನ ಪಡಿಸಿರುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರೆಸಾರ್ಟ್‍ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ವಿಚಾರವಾಗಿ ಹೊಸಪೇಟೆಯಲ್ಲಿ ಪ್ರತಿಕ್ರಿಯೆ ನೀಡಿ, ರೆಸಾರ್ಟ್‍ಗೆ ಹೋದರೆ ತಪ್ಪೇನೂ. ನಾನು ಹೋಗುತ್ತೇನೆ.
ನಾನು ನಿನ್ನೆ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೆ. ಇಂದು ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿರುವೆ. ಯಾರು, ಎಲ್ಲಿ ಉಳಿದುಕೊಂಡರೆ ಏನು.
ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ಪಕ್ಷದಲ್ಲಿ ಅಸಮಾಧಾನಿತರು ಯಾರೂ ಇಲ್ಲ.
ಯಾರು ಅಸಮಾಧಾನಗೊಂಡಿದ್ದರೋ ಅವರೊಂದಿಗೆ ನಾನೇ ಖುದ್ದು ಮಾತನಾಡಿ ಸಮಾಧಾನ ಪಡಿಸಿರುವೆ ಎಂದು ತಿಳಿಸಿದರು.
ಇದೇ ವೇಳೆ ಯತ್ನಾಳ್ ಬಗ್ಗೆ ಮಾತನಾಡಿ, ಸಿಎಂ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಪಕ್ಷದ ಶಿಸ್ತು ಸಮಿತಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಹೊಸಪೇಟೆಯಲ್ಲಿ ಇಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಣಿ ನಡೆಯಿತು. ಈ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









