ಬೆಂಗಳೂರು: ಅಧಿಕಾರಿ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ತಲೆದಂಡಕ್ಕೆ ಪುರಾವೆ ಬೇಕಲ್ಲವೇ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡೆತ್‌ನೋಟ್ ನೋಡಿಲ್ಲ. ಅಧಿಕಾರಿಗಳು ಅದನ್ನು ಪರಿಶೀಲನೆ ಮಾಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಬೇಗ ಡೆತ್‌ನೋಟ್ ಸಿಗುತ್ತೆ. ಕೆಲವು ಬಾರಿ ತಡವಾಗಿ ಸಿಗುತ್ತೆ. ಡೆತ್‌ನೋಟ್ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಮುಂದಕ್ಕೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪ ಪ್ರಕರಣವನ್ನು ಇದಕ್ಕೆ ಹೋಲಿಕೆ ಮಾಡಬೇಡಿ. ಆ ಪ್ರಕರಣದಲ್ಲಿ ಈಶ್ವರಪ್ಪ ಹೆಸರಿತ್ತು. ಆದರೆ, ಈ ಪ್ರಕರಣದಲ್ಲಿ ಹೆಸರಿಲ್ಲ. ತನಿಖೆ ಬಳಿಕ ಎಲ್ಲಾ ಗೊತ್ತಾಗುತ್ತೆ. ಒಂದು ಅಕೌಂಟ್‌ನಿಂದ ಇನ್ನೊಂದು ಅಕೌಂಟ್‌ಗೆ ಹಣ ವರ್ಗಾವಣೆ ಆಗಿ ಹೋಗಿದೆ. ಅಲ್ಲಿಂದ ನಾಲ್ಕೈದು ಅಕೌಂಟ್‌ಗೆ ಹಣ ಹೋಗಿದೆ. ಎಲ್ಲದಕ್ಕ ತನಿಖೆಯಿಂದಲೇ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.