ಡಗ್ಸ್ ವಿಚಾರದಲ್ಲಿ ಯಾವುದೇ ಸಾಫ್ಟ್ ಕಾರ್ನರ್ : ಶ್ರೀನಿವಾಸ್ ಪೂಜಾರಿ
ಕೊಡಗು : ಪೊಲೀಸರು ಡ್ರಗ್ಸ್ ಕೇಸ್ ವಿಚಾರದಲ್ಲಿ ಯಾವುದೇ ಸಾಫ್ಟ್ ಕಾರ್ನರ್ ತಾಳಿಲ್ಲ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಿಜೆಪಿಗರನ್ನ ಡಗ್ಸ್ ವಿಚಾರವಾಗಿ ಪರಿಕ್ಷೇಗೆ ಒಳಪಡಿಸಬೇಕು ಎಂಬ ತಂಗಡಗಿ ಹೇಳಿಕೆಗೆ ಕೊಡಗಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕುಹಕ ವಿಚಾರಗಳಿಗೆ ನಾವು ತಡೆಕಡಿಸಿಕೊಳ್ಳುವ ವಿಚಾರ ಇಲ್ಲ. ಡಗ್ಸ್ ವಿಚಾರವಾಗಿ ಬಿಜೆಪಿ ಗಟ್ಟಿ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಇನ್ನು ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯಾಗಿದ್ದಾಗಲೆ ಡ್ರಗ್ಸ್ ವಿಚಾರವಾಗಿ ಪ್ರಸ್ತಾಪಿಸಿದ್ದರು. ಎಂತ ಕಠಿಣ ಪರಿಸ್ಥಿತಿ ಬಂದ್ರು ಅದನ್ನ ಎದುರಿಸುತ್ತೇವೆ.
ಹಾಗೂ ಅದನ್ನ ಮಟ್ಟ ಹಾಕುತ್ತೇವೆ. ಡಗ್ಸ್ ವಿಚಾರದಲ್ಲಿ ಯಾವುದೇ ಶಕ್ತಿಗಳಿಗೆ ಬಗ್ಗೊದಿಲ್ಲ ಎಂದು ಹೇಳಿದರು.
ಇದೇ ವೇಳೆ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಸಾಫ್ಟ್ ಕಾರ್ನರ್ ತಾಳಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪೊಲೀಸರು ಡಗ್ಸ್ ವಿಚಾರದಲ್ಲಿ ಯಾವುದೇ ಸಾಪ್ಟ್ ಕಾರ್ನರ್ ತಾಳಿಲ್ಲ. ಅವರ ಕೆಲಸ ಪೊಲೀಸರು ನಿಷ್ಟೆಯಿಂದ ಮಾಡಿದ್ದಾರೆ. ಯಾವುದಕ್ಕೂ ಬಗ್ಗದೆ ಡಗ್ಸ್ ಲಾಬಿಯನ್ನ ಮಟ್ಟ ಹಾಕೆ ಹಾಕುತ್ತೇವೆ ಎಂದು ಸಚಿವರು ಹೇಳಿದರು.