ಪಂಜಾಬ್ ನಲ್ಲೊಂದು ವಿಶಿಷ್ಟ ವಿವಾಹ ಸಮಾರಂಭ – ಉಡುಗೊರೆಯ ಬದಲು ರೈತರಿಗಾಗಿ ಹಣ ಜಮಾ ಮಾಡಲು ಮನವಿ
ಚಂಡೀಗಢ, ಡಿಸೆಂಬರ್09: ಇದೀಗ ಹೊಸ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ರೈತರು ತಮ್ಮ ಹಿತಾಸಕ್ತಿಗೆ ಹೋರಾಡಲು ಮುಂದೆ ಬಂದಿದ್ದಾರೆ ಮತ್ತು ಅನೇಕ ನಾಯಕರ, ಪಕ್ಷಗಳ ಬೆಂಬಲವನ್ನೂ ಪಡೆಯುತ್ತಿದ್ದಾರೆ. ಆದರೆ, ಸರ್ಕಾರ ತನ್ನ ನಿರ್ಧಾರದ ಬಗ್ಗೆ ಇನ್ನೂ ಅಚಲವಾಗಿದೆ. ಈ ಎಲ್ಲದರ ಮಧ್ಯೆ ಪಂಜಾಬ್ ನಲ್ಲಿ ಒಂದು ವಿಶಿಷ್ಟ ಪ್ರಕರಣ, ವಿವಾಹ ಸಮಾರಂಭವೊಂದರಲ್ಲಿ ಹೊರಹೊಮ್ಮಿದೆ.
ಪಂಜಾಬ್‌ನ ವಿವಾಹ ಸಮಾರಂಭದಲ್ಲಿ ಉಡುಗೊರೆಗಳನ್ನು ನೀಡದೆ ದೆಹಲಿ ಮತ್ತು ಸುತ್ತಮುತ್ತ ಪ್ರತಿಭಟನೆ ನಡೆಸುತ್ತಿರುವ ರೈತರ ಹಿತದೃಷ್ಟಿಯಿಂದ ಹಣವನ್ನು ಜಮಾ ಮಾಡಬೇಕೆಂದು ಕುಟುಂಬವೊಂದು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಮನವಿ ಮಾಡಿದೆ.
Can anything match this in dedication toward supporting #Farmers ?
Today in a wedding in Mansa, Punjab.
A bag was put near stage and an announcement was made:"We won't take any as Shagun, whatever you want to give, please put in the bag, and money will go to #FarmersProtest " pic.twitter.com/mzATmnaroi
— Sanjeev Goyal (@sanjeev_goyal) December 8, 2020
ಇದು ಚಂಡೀಗಢದಲ್ಲಿ ನಡೆದ ಒಂದು ವಿಶಿಷ್ಟ ಪ್ರಕರಣವಾಗಿದೆ. ಚಂಡೀಗಢದಿಂದ 250 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಮುಕ್ತಸರ್‌ನಲ್ಲಿ ವಿವಾಹ ಸಮಾರಂಭವೊಂದು ನಡೆಯಿತು. ಅಲ್ಲಿ ಕುಟುಂಬ ಸದಸ್ಯರು ಅತಿಥಿಗಳಿಗೆ, ರೈತರಿಗೆ ಅನುಕೂಲವಾಗುವಂತೆ ಸಾಧ್ಯವಾದಷ್ಟು ಹಣವನ್ನು ದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಕೊತ್ತಂಬರಿ ಮತ್ತು ಮೆಂತೆ ನಡುವೆ ವ್ಯತ್ಯಾಸವೇನು: ರಾಹುಲ್ ಗಾಂಧಿಗೆ ಸವಾಲು ಎಸೆದ ಗುಜರಾತ್ ಸಿಎಂ ರೂಪಾನಿ
ಅವರು ಸ್ಥಳದಲ್ಲಿ ದೇಣಿಗೆ ಪೆಟ್ಟಿಗೆಯನ್ನು ಸಹ ಇಟ್ಟಿದ್ದು, ಅತಿಥಿಗಳಿಗೆ ಹಣವನ್ನು ದಾನ ಮಾಡುವಂತೆ ಮನವಿ ಮಾಡಿದರು. ಇದು ತುಂಬಾ ಸುಂದರವಾದ ದೃಶ್ಯವಾಗಿತ್ತು, ಅದು ನೋಡುವವರ ಹೃದಯವನ್ನು ಕರಗಿಸಿ ಬಿಟ್ಟಿತ್ತು.
ಪ್ರತಿಭಟನಾ ನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಈವರೆಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಇಂದು ಮತ್ತೆ ಮಾತುಕತೆ ನಡೆದಿದೆ. ಹೊಸ ಕಾನೂನು ಹಿಂಪಡೆಯುವವರೆಗೂ ತಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ರೈತರು ಹೇಳಿದ್ದಾರೆ. ಆಂದೋಲನ ನಡೆಸುತ್ತಿರುವ ರೈತರಿಗೆ ಸರ್ಕಾರದ ಪರವಾಗಿ ಲಿಖಿತ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತಲೆನೋವನ್ನು ತ್ವರಿತವಾಗಿ ನಿವಾರಿಸಲು 6 ಸೂಪರ್ ಪವರ್‌ಫುಲ್ ಹರ್ಬಲ್ ಟೀಗಳು https://t.co/ULasnUIsrc
— Saaksha TV (@SaakshaTv) December 8, 2020
10 ಮತ್ತು 12 ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಮೇ 2021ರಲ್ಲಿ ನಡೆಸಲು ಪೋಷಕರ ಸಂಘಟನೆ ಆಗ್ರಹhttps://t.co/1CSV1aOgIX
— Saaksha TV (@SaakshaTv) December 8, 2020